ಸುಳ್ಯ ಗಾಂಧಿನಗರ ನಾವೂರು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಮೇ.18 ರಂದು ವಿಶೇಷವಾಗಿ ಗಣಪತಿ ಹವನ ಸಮೇತ ಪವಮಾನ ಹೋಮವು ನಡೆಯಿತು. ಬೆಳಗ್ಗೆ ದೇಲಂಪಾಡಿ ಬ್ರಹ್ಮಶ್ರೀ ವೇದಮೂರ್ತಿ ಗಣೇಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇ| ಗುರುರಾಜ ತಂತ್ರಿಯಯವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯಾಗಿ ಪೂಜೆಯು ನೆರವೇರಿತು. ಮಧ್ಯಾಹ್ನ ಹೋಮಕ್ಕೆ ಪೂರ್ಣಾಹುತಿಯಾಗಿ ಪ್ರಸಾದ ವಿತರಣೆಯಾಯಿತು. ಬಳಿಕ ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಅನ್ನ ಸಂತರ್ಪಣೆಯು ನೆರವೇರಿತು. ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಕೆ.ಉಮೇಶ್ ಹಾಗೂ ಧರ್ಮದರ್ಶಿ ಮಂಡಳಿಯ ಎಲ್ಲಾ ಸದಸ್ಯರು ಮತ್ತು ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.