ಮಂಡೆಕೋಲು ಗ್ರಾಮದ ಪೇರಾಲು ಹಂಡನಮನೆ ನಾರಾಯಣ ಗೌಡ (64)ಎಂಬವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರು
ತಂದೆ ತಮ್ಮಯ್ಯ ಗೌಡ, ಪತ್ನಿ ವೇದಾವತಿ, ಪುತ್ರರಾದ ಶ್ರೀಹರಿ, ಶ್ರೀರಾಮ, ಪುತ್ರಿಯರಾದ ಶ್ರೀಲತಾ, ಹೇಮಲತಾ, ಸೊಸೆ ರಮ್ಯಾ, ಅಳಿಯಂದಿರು, ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಅವರು ಅನೇಕ ವರ್ಷಗಳಿಂದ ಪೇರಾಲು ಅಂಬ್ರೋಟಿ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.