ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಶಾಂತಿನಗರ ಇಲ್ಲಿ ೨೦೨೨-೨೩ ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಮೇ. ೧೬ರಂದು ಆಚರಿಸಲಾಯಿತು. ತಳಿರು ತೋರಣಗಳಿಂದ ಶೃಂಗಾರಗೊಳಿಸಿದ ನಂತರ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ದಿನೇಶ್ ನಡುಬೈಲು ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು.ದೀಪ ಬೆಳಗಿಸುವುದರ ಮೂಲಕ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಮಾರಿ ಜಾನಕಿ, ದಾನಿಗಳಾದ ಮಾಯಿಲಪ್ಪ ಗೌಡ ಪಿಲಂಕುಜೆ, ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಶ್ರೀಮತಿ ಬೇಬಿ, ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ ಮತ್ತು ಸಹಶಿಕ್ಷಕಿಯರು ಹಾಜರಿದ್ದರು. ಮುಂದೆ ಅಥಿತಿಗಳು ಮಕ್ಕಳಿಗೆ ಶುಭ ಹಾರೈಸಿದರು. ಮಾಯಿಲಪ್ಪ ಗೌಡರಿಂದ ಎಲ್ಲಾ ಮಕ್ಕಳಿಗೆ ನೋಟ್ ಬುಕ್, ಪೆನ್ಸಿಲ್ ವಿತರಿಸಲಾಯಿತು. ಯಾದವ ಹುದೇರಿ ಇವರಿಂದ ಸಹಿ ತಿಂಡಿ ಪಾನೀಯ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಅಭಿಮಾನಿಗಳು, ಮಕ್ಕಳ ಪೋಷಕರು, ಎಸ್ ಡಿ ಎಮ್ ಸಿ ಯ ಸದಸ್ಯರು ಮತ್ತು ಶಾಲಾ ಬಿಸಿಯೂಟ ಸಿಬ್ಬಂದಿಗಳು ಭಾಗವಹಿಸಿದರು.