ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕೂಜುಗೋಡು
ಹರಿಹರೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸದಸ್ಯ ಐನೆಕಿದು ಗ್ರಾಮದ ಕಿಶೋರ್ ಕುಮಾರ್ ಕೂಜುಗೋಡು ಅವರನ್ನು ಆಯ್ಕೆ ಮಾಡಲಾಗಿದೆ.
ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾಗಿ ಹರಿಹರ ಪಲ್ಲತಡ್ಕ ಗ್ರಾಮದ ಆನಂದ ಕೆ. ಕೆರೆಕ್ಕೋಡಿ, ಬಾಳುಗೋಡು ಗ್ರಾಮದ ರೇಷ್ಮಾ ಪ್ರಕಾಶ್ ಕಟ್ಟೆಮನೆ, ಹರಿಹರ ಪಲ್ಲತಡ್ಕ ಗ್ರಾಮದ ಜ್ಯೋತಿ ಕೆ ಎಲ್ ಕಳಿಗೆ, ಐನೆಕಿದು ಗ್ರಾಮದ ಭವಾನಿ ಶಂಕರ ಪೈಲಾಜೆ, ಬಾಳುಗೋಡು ಗ್ರಾಮದ
ಚಂದ್ರಶೇಖರ ಕಿರಿಭಾಗ, ಬಾಳುಗೋಡು ಗ್ರಾಮದ ಚಂದ್ರಹಾಸ ಶಿವಾಲ, ಹರಿಹರ ಪಲ್ಲತಡ್ಕ ಗ್ರಾಮದ ಶರತ್ ಡಿ ಎಸ್ ಹಾಗೂ ದೇವಸ್ಥಾನದ ಅರ್ಚಕರ ಸುಬ್ರಹ್ಮಣ್ಯ ನರಸಿಂಹ ಭಟ್ ರವರಿದ್ದಾರೆ.