ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷತೆಗೆ ಹರೀಶ್ ಬೂಡುಪನ್ನೆ ರಾಜೀನಾಮೆ ನೀಡಿದ್ದಾರೆ.
ಮೂರು ವರ್ಷದ ಹಿಂದೆ ಸಿ.ಎ. ಬ್ಯಾಂಕ್ ಚುನಾವಣೆ ನಡೆದ ಬಳಿಕ ಅಧ್ಯಕ್ಷರಾಗಿ ಬಾಲಗೋಪಾಲ ಸೇರ್ಕಜೆಯವರು ಅಧಿಕಾರ ಸ್ವೀಕರಿಸಿದರು. ಡಿ.ಸಿ.ಸಿ. ಬ್ಯಾಂಕ್ ಚುನಾವಣೆ ಬಳಿಕ ನಡೆದ ಬೆಳವಣಿಗೆಯಿಂದಾಗಿ ಬಾಲಗೋಪಾಲರು ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಹರೀಶ್ ಬೂಡುಪನ್ನೆ ಯವರು ಅಧ್ಯಕ್ಷರಾಗಿ ಆಯ್ಕೆಯಾದರು. ಇದೀಗ 2 ವರ್ಷದ ಅವಧಿ ಪೂರೈಸಿದ ಹರೀಶ್ ರವರು ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದಾರೆ.
“ಪಕ್ಷ ನನ್ನನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದೆ. ಇದೀಗ ನನಗೆ ನೀಡಿದ ಅವಧಿ ಮುಗಿದಿದ್ದು ತೀರ್ಮಾನ ದಂತೆ ರಾಜೀನಾಮೆ ಸಲ್ಲಿಸಿದ್ದೇನೆ” ಎಂದು ಹರೀಶ್ ಬೂಡುಪನ್ನೆ ತಿಳಿಸಿದ್ದಾರೆ.
ಹರೀಶ್ ಬೂಡುಪನ್ನೆಯವರ ರಾಜೀನಾಮೆ ಅಂಗೀಕಾರಗೊಂಡು ಬಳಿಕ ಬಾಲಗೋಪಾಲ ಸೇರ್ಕಜೆಯವರಿಗೆ ಅಧ್ಯಕ್ಷ ರಾಗಿ ಕೆಲಸಮಾಡಲು ಪಕ್ಷ ತೀರ್ಮಾನ ಕೈಗೊಂಡಿರುವುದಾಗಿ ಹೇಳಲಾಗುತ್ತಿದೆ.