ನೀರು ತುಂಬಿ ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ
ರಸ್ತೆಯಲ್ಲಿ ಫಲಕ ಆಳವಡಿಕೆ
ಜಟ್ಟಿಪಳ್ಳ ಕೊಡಿಯಾಲಬೈಲ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನಗಳಿಗೆ, ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಅಸಾಧ್ಯವಾದ ಪರಿಸ್ಥಿತಿಯಲ್ಲಿದೆ ಜಟ್ಟಿಪಳ್ಳದಿಂದ ಕೊಡಿಯಾಲಬೈಲ್ ದುಗಲಡ್ಕ ದವರೆಗೆ ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿ ಕಳೆದ ಒಂದುವಾರದಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ವಾಹನ ಸಂಚಾರಕ್ಕೂ,ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗದ ರೀತಿಯ ರಸ್ತೆಯಾಗಿದೆ.
ಕೊಡಿಯಾಲಬೈಲ್ ಪದವಿ ಕಾಲೇಜು ಬಳಿ ಮಕ್ಕಳು ಹರಸಾಹಸ ಪಟ್ಟು ಶಾಲೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ..
ನಿನ್ನೆಯ ಮಳೆಗೆ ಜಟ್ಟಿಪಳ್ಳ ಕೊಡಿಯಾಲಬೈಲ್ ರಸ್ತೆ ಮಧ್ಯೆ ಇರುವ ಹೊಂಡಕ್ಕೆ ಸಾರ್ವಜನಿಕರು “ದಯವಿಟ್ಟು ನಮ್ಮ ರಸ್ತೆಯನ್ನು ಸರಿಮಾಡಿ ಕೊಡಿ ಎಂದು ಫಲಕವನ್ನು ನೇತು ಹಾಕಿದ್ದಾರೆ”
ಇದನ್ನಾದರೂ ಜನಪ್ರತಿನಿಧಿಗಳು ನೋಡಿ ರಸ್ತೆ ಸರಿಪಡಿಸಲಿ ಎಂದು ಸಾರ್ವಜನಿಕರ ಅಳಲು.
ಇತ್ತೀಚಿನ ದಿನದಂದ ಸುರಿಯುತ್ತಿರುವ ಮಳೆಗೆ ಕೊಡಿಯಾಲಬೈಲ್ ಸೇತುವೆ ಮೇಲೆ ಮಳೆಯ ನೀರು ನಿಂತು ಕೆಳಗೆ ಹರಿಯುವ ಹೊಳೆ ಮೇಲೆಯು ಹರಿಯುತ್ತಿದೆ ಇದೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿನ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ರಸ್ತೆಯ ಬಾರಿ ಚರ್ಚೆಯು ನಡೆಯುತ್ತಿದೆ..
ಹಲವಾರು ವರ್ಷಗಳಿಂದ ಅಭಿವೃದ್ಧಿ ಭರವಸೆ ಮಾತ್ರ ಇದೆ ಅಭಿವೃದ್ಧಿ ಕಾಣಲಿಲ್ಲ ಅದರೊಂದಿಗೆ ಚುನಾವಣಾ ಬಹಿಷ್ಕಾರದ ಮಾತುಗಳು ಕೇಳಿಬರುತ್ತಿದೆ..
ಅದರಲ್ಲಿ ರಸ್ತೆ ಅಭಿವೃದ್ಧಿ ಮಾಡಿಸಲು ಸಾಧ್ಯವಾಗದಿದ್ದರೆ ಸ್ಥಳೀಯ ಜನಪ್ರತಿನಿಧಿಗಳು ರಾಜಿನಾಮೆ ನೀಡಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..
ನಿನ್ನೆ ಸುರಿದ ಮಳೆಗೆ ಅಲ್ಲಲೀ ನಿಂತ ನೀರು ಕೊಡಿಯಾಲಬೈಲ್ ಸೇತುವೆ ಮೇಲೆ ನಿಂತ ನಿರನ್ನು ಮನು ಕೊಡಿಯಾಲಬೈಲ್, ಸೀರಾಜ್ ಜಟ್ಟಿಪಳ್ಳ, ಸಮದ್ ಬಾರಿಕ್ಕಾಡ್ ತಂಡ ತೆರವು ಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು.