ಸುಳ್ಯದ ಗಾಂಧಿನಗರ ದಲ್ಲಿರುವ ಮಾಸ್ಟರ್ ಕಾಂಪ್ಲೆಕ್ಸ್ ನಲ್ಲಿ ಯಶವಂತ ಪಟ್ರುಕೋಡಿ ಯವರ ಮಾಲಕತ್ವದ ಪಟ್ರುಕೋಡಿ ಸ್ವೀಟ್ಸ್ ಮತ್ತು ಬೇಕರಿ ಮೇ.19 ರಂದು ಶುಭಾರಂಭಗೊಂಡಿದೆ.
ಬೆಳಗ್ಗೆ ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವು ನೆರವೇರಿತು. ಹಿರಿಯರಾದ ಮಾಲಕರ ತಂದೆ ಮಹಾಬಲ ಗೌಡ ಪಟ್ರುಕೋಡಿ ಮತ್ತು ತಾಯಿ ಶ್ರೀಮತಿ ಲೀಲಾವತಿ ಪಟ್ರುಕೋಡಿ ಯವರು ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಗೋಪಾಲ ಗೌಡ ಪಟ್ರುಕೋಡಿ, ಧನು ಹಾರ್ಡ್ವೇರ್ ಮಾಲಕ ಧನಂಜಯ, ಜತ್ತಪ್ಪ ಗೌಡ ಉಬರಡ್ಕ, ಪರಶಿನಿ ಹೋಟೆಲ್ ಮಾಲಕ ನಾರಾಯಣ, ಮಾಲಕರ ಸಹೋದರರಾದ ಹರೀಶ್ ಪಟ್ರುಕೋಡಿ, ವಾಸುದೇವ ಪಟ್ರುಕೋಡಿ, ಶ್ರೀಮತಿ ಸೌಮ್ಯ ಯಶವಂತ್, ಶ್ರೀಮತಿ ಅಕ್ಷಿತಾಹರೀಶ್, ಶ್ರೀಮತಿ ಶ್ವೇತಾ ವಾಸುದೇವ, ಹಸ್ತಾ, ಧನ್ವಿ, ರಂಜಿತ್, ನಿಶಾಂತ್,ಪ್ರಮೋದ್,ದರ್ಶನ್ ಉಪಸ್ಥಿತರಿದ್ದರು. ಆಗಮಿಸಿದ ಬಂಧು ಮಿತ್ರರು ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಪಟ್ರುಕೋಡಿ ಹೆಸರಿನ ಬೇಕರಿಯು ಕಳೆದ 14 ವರ್ಷಗಳಿಂದ ಸುಳ್ಯದಲ್ಲಿ ವ್ಯಾಪಾರ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿದ್ದು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಸುಸಜ್ಜಿತ ಸ್ವಂತ ತಯಾರಿಕಾ ಘಟಕ ವನ್ನು ಹೊಂದಿದ್ದು ಶುಚಿ ರುಚಿಯಾದ ತಿಂಡಿ ತಿನಿಸುಗಳನ್ನು ತಯಾರಿಸಿಕೊಡುವ ಮೂಲಕ ಸಂಸ್ಥೆಯ ಹೆಸರು ಮನೆ ಮಾತಾಗಿದೆ. . ಸುಳ್ಯದ ಓಡಬಾಯಿಯಲ್ಲಿ ಮೊದಲ ಸಂಸ್ಥೆಯನ್ನು ಪ್ರಾರಂಭಿಸಿದ ನಂತರ ಕಲ್ಲುಗುಂಡಿಯಲ್ಲಿ ಮತ್ತು ಇದೀಗ ಗಾಂಧಿನಗರದಲ್ಲಿ ಮೂರನೇ ಸಂಸ್ಥೆಯನ್ನು ಪ್ರಾರಂಭಿಸಿರುತ್ತಾರೆ.