ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಸಭೆಯು ಸುಬ್ರಹ್ಮಣ್ಯ ಗ್ರಾ.ಪಂ ನ ಕುಮಾರಧಾರ ಸಭಾಂಗಣದಲ್ಲಿ ಮೇ.18 ರಂದು ನಡೆಯಿತು.
ಸಭೆಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ಕ್ಷೇತ್ರದಲ್ಲಿ ದೇವಸ್ಥಾನದ ಅಭಿವೃಧ್ಧಿ ಕೆಲಸಗಳ ತಾರತಮ್ಯ ಹಾಗೂ ಪೂಜಾ ವಿಧಿವಿಧಾನಗಳ ಬಗ್ಗೆ ಆಗಬೇಕಾದ ಮೂಲ ಸೌಕರ್ಯ ಗಳ ಬಗ್ಗೆ ಯಾವುದೇ ಗಮನ ಕೊಡದೇ ಕೇವಲ ಸ್ವ ಹಿತಾಸಕ್ತಿಯ ವಿಚಾರಗಳ ಬಗ್ಗೆ ಚರ್ಚೆಯಾಗಿರುವುದಾಗಿ ವರದಿಯಾಗಿದೆ.
ದಿನೇ ದಿನೇ ಕ್ಷೇತ್ರದ ಆಡಳಿತ ವೈಫಲ್ಯತೆ, ಮೂಲ ಸೌಕಯ೯ದ ಕೊರತೆ, ಆಡಳಿತದೊಳಗಿನ ವೈಯಕ್ತಿಕ ಕಚ್ಚಾಟಗಳೇ ಜಾಸ್ತಿಯಾಗಿದೆ. ಶ್ರೀ ದೇವಳದಲ್ಲಿ ಆಗಬೇಕಾದ ಮೂಲಸೌಕರ್ಯದ ವ್ಯವಸ್ಥೆ ಬಗ್ಗೆ ಆಡಳಿತದ ಬೇಜಾವಾಬ್ದಾರಿ ವಹಿಸುತಿದ್ದಾರೆ ಎಂದು ಸಭೆಯಲ್ಲಿ ಆರೋಪಿಸಿದ್ದಾರೆ.
ಹಿತರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಧಾಮಿ೯ಕ ದತ್ತಿ ಆಯುಕ್ತರನ್ನು ಭೇಟಿಮಾಡಿ ಸುಬ್ರಹ್ಮಣ್ಯದ ಆಗುಹೋಗುಗಳ ವಿಚಾರಗಳನ್ನು ಇಲಾಖೆಯ ಗಮನಕ್ಕೆ ತರುವುದಾಗಿ ನಿರ್ಣಯಿಸಲಾಗಿದೆ. ಈ ಬಗ್ಗೆ ಹಿತರಕ್ಷಣಾವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಸಭೆಯಲ್ಲಿ ತಿಳಿಸಿದರು.
ಕ್ಷೇತ್ರದ ಮೂಲಗಣಪತಿ ದೇವರು ಅನಾಥವಾಗಿದ್ದು ದರ್ಶನದ, ಪೂಜಾ ವ್ಯವಸ್ಥೆ , ಪರಿವಾರ ದೇವರಿಗೆ ಮೂರು ಹೊತ್ತು ದಿಟ್ಟಂ ಪ್ರಕಾರ ನೈವೈದ್ಯ, ದೇವಳದ ದಿಟ್ಟಂ ವಿರುದ್ದವಾಗಿ ದೇವಳದಲ್ಲಿ ನಡೆಯುತ್ತಿರುವ ಪೂಜಾ ಪಧ್ಧತಿಯ ಬಗ್ಗೆ ತನಿಖೆ, ಕ್ಷೇತ್ರದಲ್ಲಿ ಅಜಿರ್ಣಾವಸ್ಥೆಯಲ್ಲಿರುವ ಶೃಂಗೇರಿ ಮಠದ ಪುನರ್ ನಿರ್ಮಾಣ,ದೇವಾಲಯದ ಶ್ರೀ ದೇವರ ಆಸ್ತಿಯ ರಕ್ಷಣೆ, ಪರಿವಾರದೇವರ ಹೆಸರಿನಲ್ಲಿರುವ ಎಲ್ಲಾ ಆಸ್ತಿಗಳ ರಕ್ಷಣೆ,ಮೂಲ ಸೇವೆ ಆಶ್ಲೇಷಾ ಬಲಿಗೆ ಸೂಕ್ತ ವ್ಯವಸ್ಥೆ , ಸರ್ಪಸಂಸ್ಕಾರ ಪೂಜಾ ವಿಚಾರದಲ್ಲಿ ಸೂಕ್ತ ಸುಧಾರಣೆಗಳು, ದೇವಳದ ಪೂಜಾ ಪರಿಕರಗಳಾದ ತೆಂಗಿನಕಾಯಿ, ತುಪ್ಪ ಮೊದಲಾದವುಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ, ಅನಧಿಕೃತವಾಗಿ ದೇವಳದ ಸಹಸಂಸ್ಥೆಗಳಿಗೆ ನೇಮಕಮಾಡಿರುವ ಬಗ್ಗೆ , ಭಕ್ತರಿಗೆ ಅನೂಕೂಲಕರವಾದ ಅಂಗಡಿಗುಡ್ಡೆಯಲ್ಲಿ ನಿರ್ಮಾವಾಗಬೇಕಿದ್ದ ಸಭಾಂಗಣದ ನಿರ್ಮಾಣ, ದೇವಳದ ಸುತ್ತುಪೌಳಿ ನಿರ್ಮಾಣ, ದೇವಾಲಯ ಪ್ರವೇಶದ ಅಕ್ರಮ ದಾರಿಗಳ ಅನಧಿಕೃತ ಪ್ರವೇಶಗಳ ಮೇಲೆ ನಿರ್ಬಂದ, ದೇವಳದ ಭಧ್ರತೆಯ ಬಗ್ಗೆ ಸೂಕ್ತಕ್ರಮ ಮೊದಲಾದ ವಿಚಾರಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಧಾಮಿ೯ಕ ದತ್ತಿ ಆಯುಕ್ತರನ್ನು ಭೇಟಿಮಾಡಿ ಒತ್ತಾಯಿಸುವ ಬಗ್ಗೆ ನಿಣ೯ಯ ಕೈಗೊಳ್ಳಲಾಯಿತು.
ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಶ್ರೀನಾಥ್, ಸದಸ್ಯಗಳಾದ ಪ್ರಶಾಂತ್ ಭಟ್ ಮಾಣಿಲ, ಮೋನಪ್ಪ ಮಾನಾಡು, ರವಿಂದ್ರಕುಮಾರ್ ರುದ್ರಪಾದ, ಶಿವರಾಮ ರೈ, ವೆಂಕಟೇಶ್, ಕರಣಾಕರ ಬಿಳಿಮಲೆ, ಗುರುಪ್ರಸಾದ್ ಪಂಜ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.