ಸುಳ್ಯ ತಾಲೂಕು ಪಂಚಾಯತ್ ಮಾಸಿಕ ಸಭೆ ಇಂದು ನಡೆಯಿತು. ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಗಾಯತ್ರಿ ಎಸ್. ನಾಯಕ್ ವಹಿಸಿದ್ದಾರೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಉಪಸ್ಥಿತರಿದ್ದರು.
ಎಲ್ಲ ಇಲಾಖಾಧಿಕಾರಿಗಳು ಗ್ರೇಡ್ ಟು ತಹಶೀಲ್ದಾರ್ ಮಂಜುನಾಥ್, ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು, ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆ, ರೇಂಜರ್ ಮಂಜುನಾಥ್, ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್, ಜೆ.ಇ. ಹರಿಶಂಕರ್, ಕೃಷಿ ಇಲಾಖಾಧಿಕಾರಿ ಮೋಹನ ನಂಗಾರು, ಸಮಾಜ ಕಲ್ಯಾಣಾಧಿಕಾರಿ , ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಶಿಕ್ಷಣ ಇಲಾಖೆಯ ನಳಿನಿ, ಶಿಕ್ಷಣ ಸಮನ್ವಯಾಧಿಕಾರಿ ವೀಣಾ ಎಂ.ಟಿ., ತೋಟಗಾರಿಕಾ ಇಲಾಖಾಧಿಕಾರಿ ಸುಹಾನ, ಜಿ.ಪಂ. ಇಂಜಿನಿಯರಿಂಗ್ ಇಲಾಖೆಯ ಇಂಜಿನಿಯರ್ ಗಳು, ಲೊಕೋಪಯೋಗಿ ಇಂಜಿನಿಯರಿಂಗ್ ಇಲಾಖೆಯ ಇಂಜಿನಿಯರ್ ಗಳು, ಆರೋಗ್ಯ ಇಲಾಖೆ ಮತ್ತಿತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.