ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಹೊಸದಾಗಿ ನಿರ್ಮಾಣಗೊಂಡ ಸೇತುವೆಯ ಬದಿ ಪಾಲಡ್ಕ – ಕುಕ್ಕಂಬಳ ಸಂಪರ್ಕದ ರಸ್ತೆಯ ಬದಿ ತಡೆಗೋಡೆ ನಿರ್ಮಿಸುವ ಬಗ್ಗೆ ಮೀನುಗಾರಿಕೆ ಬಂದರು ಒಳನಾಡು ಸಚಿವ ಎಸ್.ಅಂಗಾರರವರು ಮೇ.17 ರಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಾನಿಯಾದ ಸರಕಾರಿ ಶಾಲೆಯ ಕಟ್ಟಡವನ್ನು ವೀಕ್ಷಿಸಿದರು. ಸೇತುವೆಯ ಅಂತಿಮ ಹಂತದ ಕೆಲಸವನ್ನು ಪೂರ್ತಿಗೊಳುಸುವಂತೆ ಸೂಚನೆ ನೀಡಿದರು. ಸುಳ್ಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳಾದ ಲೋಕೇಶ್, ಪರಮೇಶ್ ಹಾಗೂ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಪಂ.ಸದಸ್ಯ ಸುದೇಶ್ ಅರಂಬೂರು, ವೇದಾವತಿ ನೆಡ್ಚಿಲು, ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ವೆಂಕಟ್ ವಳಲಂಬೆ ಹಾಗೂ ಸ್ಥಳೀಯ ಗ್ರಾಮಸ್ಥರು ಜತೆಯಲ್ಲಿದ್ದರು.