ಎಸ್‌ಎಸ್‌ಎಲ್‌ಸಿ : ಸುಳ್ಯ ತಾಲೂಕಿಗೆ ಶೇ. 87.94 ಫಲಿತಾಂಶ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಆರು ಶಾಲೆಗಳಿಗೆ ಶೇ. 100 ಫಲಿತಾಂಶ

ಶಾಲಾವಾರು ಫಲಿತಾಂಶದ ಫುಲ್ ಡಿಟೇಲ್ಸ್ ಇಲ್ಲಿದೆ

ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ತಾಲೂಕಿಗೆ ಶೇ. 87.94 ಫಲಿತಾಂಶ ಲಭ್ಯವಾಗಿದೆ.
ಈಗ ಕಡಬ ತಾಲೂಕಿಗೆ ಸೇರಿರುವ ಮತ್ತು ಈ ಹಿಂದೆ ಸುಳ್ಯ ತಾಲೂಕಿನೊಂದಿಗಿದ್ದ ವಿದ್ಯಾಸಂಸ್ಥೆಗಳ ಸಹಿತ ಈ ಫಲಿತಾಂಶವಿದೆ. ಸುಳ್ಯ ತಾಲೂಕಿನಲ್ಲಿ ಒಟ್ಟು 1822 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1655  ಮಂದಿ ತೇರ್ಗಡೆಗೊಂಡು ಶೇ. 87.94 ಫಲಿತಾಂಶವಾಗಿದೆ.
ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಲ್ಲಾ 47 ವಿದ್ಯಾರ್ಥಿಗಳು ಚೊಕ್ಕಾಡಿ ಶ್ರೀ ಭಗವಾನ್ ಸತ್ಯಸಾಯಿ ಪ್ರೌಢಶಾಲೆಯ 84 ವಿದ್ಯಾರ್ಥಿಗಳು, ಸುಳ್ಯದ ಸ್ನೇಹ ಪ್ರೌಢಶಾಲೆಯ 17 ವಿದ್ಯಾರ್ಥಿಗಳು, ಕಲ್ಲುಗುಂಡಿ ಸವೇರಪುರ ಆಂಗ್ಲಮಾಧ್ಯಮ ಪ್ರೌಢಶಾಲೆಯ 47 ವಿದ್ಯಾರ್ಥಿಗಳು, ನಿಂತಿಕಲ್ಲು ಕೆಎಸ್‌ಜಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 1೦ ವಿದ್ಯಾರ್ಥಿಗಳು, ಗೂನಡ್ಕ ತೆಕ್ಕಿಲ್ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ತೇರ್ಗಡೆಗೊಂಡು ಈ ಸಂಸ್ಥೆಗಳಿಗೆ ಶೇ. 1೦೦ ಫಲಿತಾಂಶ ಬಂದಿದೆ.
ಸುಳ್ಯ ತಾಲೂಕಿನ ಸರಕಾರಿ ಶಾಲೆಗಳ ಪೈಕಿ 873 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 720 ಮಂದಿ ತೇರ್ಗಡೆಗೊಡು ಶೇ. 83.47 ಫಲಿತಾಂಶವಾಗಿದೆ. ಸುಲ್ಯ ಜೂನಿಯರ್ ಕಾಲೇಜಿಗೆ ಶೇ. 81.34, ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಶೇ. 9೦.67, ಪಂಜ ಜೂನಿಯರ್ ಕಾಳೇಜಿಗೆ ಶೇ. 84, ಗುತ್ತಿಗಾರ ಜೂನಿಯರ್ ಕಾಲೇಜಿಗೆ ಶೇ. 73.33, ಅಜ್ಜಾವರ ಸರಕಾರಿ ಪ್ರೌಢಶಾಲೆಗೆ ಶೇ. 65.45, ಹರಿಹರಪಲ್ಲತ್ತಡ್ಕ ಜೂನಿಯರ್ ಕಾಲೇಜಿಗೆ ಶೇ. 51.14, ಎಲಿಮಲೆ ಸರಕಾರಿ ಪ್ರೌಢಶಾಲೆಗೆ ಶೇ. 96.49 ಮರ್ಕಂ,ಜ ಸರಕಾರಿ ಪ್ರೌಢಶಾಲೆಗೆ ಶೇ. 92.31, ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಶೇ. 5೦, ಆಲೆಟ್ಟಿ ಸರಕಾರಿ ಪ್ರೌಢಶಾಲೆಗೆ ಶೇ. 96.43, ಎಡಮಂಗಲ ಸರಕಾರಿ ಪ್ರೌಢಶಾಲೆಗೆ ಶೇ. 68.76, ದುಗಲಡ್ಕ ಸರಕಾರಿ ಪ್ರೌಢಶಾಲೆಗೆ ಶೇ. 77.42, ಐವರ್ನಾಡು ಜೂ. ಕಾಲೇಜಿಗೆ ಶೇ. 92.59, ಏನೆಕಲ್ಲು ಸರಕಾರಿ ಪ್ರೌಢಶಾಲೆಗೆ ಶೇ. 83.33, ಎಣ್ಮೂರು ಸ. ಪ್ರೌಢಶಾಲೆಗೆ ಶೇ. 78.79, ಸಂಪಾಜೆ ಸರಕಾರಿ ಪ್ರೌಢಶಾಲೆಗೆ ಶೇ. 75 ಫಲಿತಾಂಶ ಬಂದಿದೆ.
ಅನುದಾನಿತ ಶಾಲೆಗಳ ಪೈಕಿ 427 ವಿದ್ಯಾರ್ಥಿಗಳು ಪಪರೀಕ್ಷೆ ಬರೆದಿದ್ದು, 366 ಮಂದಿ ತೇರ್ಗಡೆಗೊಂಡು ಶೇ. 85.71 ಫಲಿತಾಂಶವಾಗಿದೆ. ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಗೆ ಶೇ. 82.56 , ಸುಬ್ರಹ್ಮಣ್ಯ ಸುಬ್ರಹ್ಮಣ್ಯೇಶ್ವರ ಪ.ಪೂರ್ವ ಕಾಲೇಜಿಗೆ ಶೇ. 84, ಕುಕ್ಕುಜಡ್ಕ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕಕ್ಕೆ ಶೇ. 94.44, ಅರಂತೋಡು ನೆಹರೂ ಸ್ಮಾರಕ ಕಾಲೇಜಿಗೆ ಶೇ, 88.28, ಸುಳ್ಯ ಶಾರದಾ ಮಹಿಳಾ ಕಾಲೇಜಿಗೆ ಶೇ. 92.59, ಕೊಲ್ಲಮೊಗ್ರ ಕೆವಿಜಿ ಪ್ರೌಢಶಾಲೆಗೆ ಶೇ. ೭೫, ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಗೆ ಶೇ. 83.72 ಫಲಿತಾಂಶವಾಗಿದೆ.
ಅನುದಾನ ರಹಿತ ಶಾಲೆಗಳ ಪೈಕಿ 582 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 569 ಮಂದಿ ಉತ್ತೀರ್ಣರಾಗಿ ಶೇ. 97.77 ಫಲಿತಾಂಶವಾಗಿದೆ. ಸುಳ್ಯದ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ. 96.67, ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ. 99.೦4, ಸುಳ್ಯದ ಗ್ರೀನ್‌ವ್ಯೂ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ. 91.18, ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ. 99.21, ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ಶಾಲೆಗೆ ಶೇ. ೯೫.೨೪, ಎಲಿಮಲೆ ಜ್ಞಾನದೀಪ ಪ್ರೌಢಶಾಲೆಗೆ ಶೇ. 96, ಜಾಲ್ಸೂರು ವಿನೋಬಾನಗರ ವಿವೇಕಾನಂದ ಪ್ರೌಢಶಾಲೆಗೆ ಶೇ. 91.11 ಫಲಿತಾಂಶ ಬಂದಿದೆ.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.