ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿದ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ನ ಮಹಾ ಪೋಷಕ ಪಂಜ ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ಅಶೋಕ್ ನಾಯಕ್ ಪುತ್ತಿಗೆ ಹಿರಿಯಡ್ಕ ರವರಿಗೆ ಅಭಿನಂದನಾ ಕಾರ್ಯಕ್ರಮ ಮೇ.18 ರಂದು. ಜರುಗಿತು.
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ನ ಗೌರವ ಸಲಹೆಗಾರ ಬಿ.ಕೆ ಮಾಧವ ಗೌಡ ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯರು ರವಿ. ಬಿ ನಾಗತೀರ್ಥ ರವರು ನೆರವೇರಿಸಿದರು, ನವೀನ್ ನಾಗತೀರ್ಥ ಸ್ವಾಗತಿಸಿದರು,ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ನ ಕಾರ್ಯದರ್ಶಿ ಶರತ್ ಕುದ್ವ ವಂದಿಸಿದರು.ಸಂದೀಪ್ ಪಲ್ಲೋಡಿ ಇವರು ಕಾರ್ಯಕ್ರಮ ನಿರೂಪಿದರು, ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ನ ಸಿಬ್ಬಂದಿಗಳು, ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ದೇರಾಜೆ ಮತ್ತು ಲಿಖಿತ್ ಪಲ್ಲೋಡಿ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ, ಕ್ಲಬ್ನ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಕರಿಮಜಲು ಹಾಗೂ ಕ್ಲಬ್ನ ಸದಸ್ಯರುಗಳು ಭಾಗವಹಿದ್ದರು.