ಸುಳ್ಯದ ಶ್ರೀ ರಾಂಪೇಟೆಯಲ್ಲಿರುವ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಸುಳ್ಯ ಫ್ಯಾಷನ್ ವೆಂಚರ್ ರವರ ಪಾಲುದಾರಿಕೆಯ ಗೋಕುಲಂ ಮಕ್ಕಳ ಸಿದ್ಧ ಉಡುಪುಗಳ ಸುಸಜ್ಜಿತ ಹವಾ ನಿಯಂತ್ರಿತ ಮಳಿಗೆಯನ್ನು ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರು ರಿಬ್ಬನ್ ಕತ್ತರಿಸುವ ಮೂಲಕ ಮೇ.20 ರಂದು ಉದ್ಘಾಟಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ| ಗಿರೀಶ್ ಭಾರದ್ವಾಜ್ ರವರು ದೀಪ ಪ್ರಜ್ವಲಿಸಿದರು. ಉದ್ಘಾಟನಾ ಸಮಾರಂಭ ದ ಅಧ್ಯಕ್ಷತೆಯನ್ನು ಸುಳ್ಯ ಹೆಚ್ .ಇ.ಎಫ್ .ಅಧ್ಯಕ್ಷ ನವೀನ್ ಅಳಿಕೆ ವಹಿಸಿದ್ದರು. ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಡಾ| ಹರಪ್ರಸಾದ್ ತುದಿಯಡ್ಕ, ವೈದ್ಯರಾದ ಡಾ| ಶ್ರೀಕೃಷ್ಣ ಭಟ್ ಸುಳ್ಯ,ಸುಳ್ಯ ಬಿಸಿನೆಸ್ ವೆಂಚರ್ ನ ಪಾಲುದಾರ ಚಿದಾನಂದ ವಿದ್ಯಾನಗರ ರವರು ಅತಿಥಿಗಳಾಗಿದ್ದರು. ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ್ ರವರನ್ನು ಗೋಕುಲಂ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಅಲ್ಲದೆ
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಯುವ ಪ್ರತಿಭೆಗಳಾದ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಪ್ರಥಮ ಸ್ಥಾನಿಯಾದ ಸಾತ್ವಿಕ್ ಹೆಚ್.ಎಸ್, ದ್ವಿತೀಯ ಸ್ಥಾನಿ ಪ್ರಿಮಲ್ ವೆನಿಷಾ ಡಿಸೋಜ, ಯೋಗ ಸ್ಪರ್ಧೆಯಲ್ಲಿ ಹಾರ್ದಿಕಾ ಕೆರೆಕ್ಕೋಡಿ, ಶ್ರಾವ್ಯ ಕೆ.ಹೆಚ್, ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿ ವೈಷ್ಣವಿ ಪ್ರಕಾಶ್ ಸುಳ್ಯ, ಸೋನಾಶರತ್ ಅಡ್ಕಾರ್ ರವರನ್ನು ಸುಳ್ಯ ಫ್ಯಾಷನ್ ವೆಂಚರ್ ವತಿಯಿಂದ ಫಲಪುಷ್ಪ , ಶಾಲು, ಸ್ಮರಣಿಕೆ ಮತ್ತು ಗಿಫ್ಟ್ ವೋಚರ್ ನೀಡಿ ಅಭಿನಂದಿಸಲಾಯಿತು. ಪಾಲುದಾರ ಅನೂಪ್ ಪೈ ಯವರ ನಿರಂತರ ಸೇವೆಗಾಗಿ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ಕು.ಆಶಿಕಾಚಂದ್ರಶೇಖರ ಉಬರಡ್ಕ ಪ್ರಾರ್ಥಿಸಿದರು. ಪಾಲುದಾರ ಪ್ರಸಾದ್ ಕಾಟೂರು ಸ್ವಾಗತಿಸಿದರು. ಪಾಲುದಾರ ಬಾಲಕೃಷ್ಣ ಎಂ.ಡಿ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಫ್ಯಾಷನ್ ವೆಂಚರ್ ನ ಪಾಲುದಾರರು ಸಹಕರಿಸಿದರು.
ಸುಸಜ್ಜಿತ ಹವಾ ನಿಯಂತ್ರಿತ ಮಳಿಗೆಯಲ್ಲಿ ಪ್ರಸಿದ್ಧ ಕಂಪೆನಿಯ ಅತ್ಯಾಕರ್ಷಕ ಮಕ್ಕಳ ಸಿದ್ಧ ಉಡುಪುಗಳ ಅಪೂರ್ವ ಸಂಗ್ರಹವಿರುವುದಾಗಿ ಪಾಲುದಾರರು ತಿಳಿಸಿದರು.