ಮುಖ್ಯಮಂತ್ರಿಯಾಗಿ ಚೈತ್ರೇಶ್ ಯು. ಕೆ. ಆಯ್ಕೆ
ಬಳ್ಪ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಪ್ರಜಾಪ್ರಭುತ್ವದ ಮೌಲ್ಯ ಆಶಯಗಳು ಹಾಗೂ ಮಹತ್ವವನ್ನು ಸಾರುವ ಸಲುವಾಗಿ ಮಕ್ಕಳಲ್ಲಿ ಅರಿವು ಮೂಡಿಸಲು 2022-23 ನೇ ಸಾಲಿನ ಮಂತ್ರಿಮಂಡಲವನ್ನು ಪಾರದರ್ಶಕವಾಗಿ ಚುನಾವಣೆ ಮೂಲಕ ಎಲ್ಲ ಮಕ್ಕಳು ಮತದಾನ ಮಾಡುವ ಮೂಲಕ ಶಿಕ್ಷಕರ ಸಹಕಾರದಿಂದ ಸರಕಾರವನ್ನು ರಚಿಸಲಾಯಿತು ಮುಖ್ಯಮಂತ್ರಿಯಾಗಿ ಎಂಟನೇ ತರಗತಿಯ ಚೈತ್ರೇಶ್ ಯುಕೆ ಹಾಗೂ ಉಪಮುಖ್ಯಮಂತ್ರಿಯಾಗಿ ನಕಾಶ ಎ ಇವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಗೃಹಮಂತ್ರಿ ಆರೋಗ್ಯ ಮಂತ್ರಿ ಕ್ರೀಡಾ ಮಂತ್ರಿ ಶಿಕ್ಷಣ ಮಂತ್ರಿ ಇನ್ನಿತರ ಖಾತೆಗಳನ್ನು ವಿವಿಧ ವಿದ್ಯಾರ್ಥಿಗಳಿಗೆ ಹಂಚಲಾಯಿತು. ಹಾಗೂ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕ ಶ್ರೀ ಆನಂದ ವೈ.ಈ ಇವರು ಪ್ರಮಾಣ ವಚನ ಬೋಧಿಸುವ ಮೂಲಕ ಮತ್ತು ಮುಖ್ಯಮಂತ್ರಿಗೆ ಭಾರತದ ಸಂವಿಧಾನದ ಪ್ರಸ್ತಾವನೆಯ ಪ್ರತಿಯನ್ನು ನೀಡಿ ಅಭಿನಂದಿಸಲಾಯಿತು ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಶ್ರೀಮತಿ ಭಾಗೀರಥಿ ಶ್ರೀಮತಿ ಗುಲಾಬಿ ಶ್ರೀಮತಿ ಮೋಹಿನಿ ಶ್ರೀಮತಿ ಲೋಲಾಕ್ಷಿ ಶ್ರೀಮತಿ ಪ್ರೀತಿ ಶ್ರೀಮತಿ ಹರ್ಷಿತ ಹಾಗೂ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.