ವೈಭವದ ಮೆರವಣಿಗೆ, ಅವಭೃತೋತ್ಸವ
ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯಮಠದಲ್ಲಿ
ಮೇ.13 ರಿಂದ ಮೇ.17 ರ ವರೆಗೆ ಶ್ರೀ ನರಸಿಂಹ ಜಯಂತಿ ಮಹೋತ್ಸವ ವೈಭವದಿಂದ ನಡೆಯಿತು.
ವಿವಿಧ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದಿದ್ದು ಮೇ.16 ರ ಪೂರ್ವಾಹ್ನ ವ್ಯಾಸ ಪೂರ್ಣಿಮಾ, ವ್ಯಾಸ ಪೂಜೆ ನಡೆದು ಮಹಾರಥೋತ್ಸವ ನಡೆಯಿತು. ಸಂಜೆ ವಸಂತ ಪೂಜೆ, ರಾತ್ರಿ ಡೋಲೋತ್ಸವ ನಡೆಯಿತು. ಮೇ. 17 ರಂದು ಮಠದಿಂದ ವೈಭವದ ಮೆರೆವಣಿಗೆಯಲ್ಲಿ ಸಾಗಿ ಕುಮಾರಧಾರದಲ್ಲಿ ಅವಭೃತೋತ್ಸವ ನಡೆಯಿತು. ನರಸಿಂಹ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ, ಆಶೀರ್ವಚನ ನಡೆದಿದ್ದು ಮೇ.16 ರ ಸಂಜೆ ವಿದ್ವಾನ್ ಸಂದೀಪ್ ನಾರಾಯಣ ಚೆನ್ನೈ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಗಾಯನ ನಡೆಯಿತು.
ಮೇ.17 ರ ಸಾಯಂಕಾಲ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ-ಬಪ್ಪನಾಡು, ಮುಲ್ಕಿ ಇದರಿಂದ ಯಕ್ಷಗಾನ ಬಯಲಾಟ ತ್ರಿಜನ್ಮ ಮೋಕ್ಷ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳೀಯರು, ಮಠದ ನೂರಾರು ಭಕ್ತರು ಉಪಸ್ಥಿತರಿದ್ದರು.