ಭಾರತದ ಆರ್ಥಿಕ ಅಧ್ಯಯನ ಸಂಸ್ಥೆ ಇನ್ ಸ್ಟಿಟ್ಯೂಟ್ ಆಫ್ ಎಕಾನಮಿಕ್ ಸ್ಟಡೀಸ್ ನವದೆಹಲಿಯ ಇಂಡಿಯಾ ಹ್ಯಾಬಿಟೆಟ್ ಸೆಂಟರ್ ನಲ್ಲಿ ಮೇ 19 ರಂದು ನಡೆಸಿದ ನೆಟ್ವರ್ಕಿಂಗ್ ನೆಕ್ಸ್ಟ್ – ಇಂಡಸ್ಟ್ರಿ ಇನ್ ಸಿಗ್ನಿಯಾ ವಿಚಾರಸಂಕಿರಣದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ। ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ, ಎಸ್ ಸಿಡಿಸಿಸಿ ಬ್ಯಾಂಕ್ ಅನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುವುದರಲ್ಲಿ ಅವರು ತೋರಿದ ಬದ್ಧತೆ ಮತ್ತು ಕಾರ್ಯತತ್ಪರತೆ ಹಾಗೂ ಕೊಡುಗೆಯನ್ನು ಪರಿಗಣಿಸಿ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸಿ *ಔಟ್ ಸ್ಟ್ಯಾಂಡಿಂಗ್ ಲೀಡರ್ಶಿಪ್ ಅವಾರ್ಡ್ – 2022 ನೀಡಿ ಗೌರವಿಸಿದೆ. ಅಸ್ಸಾಂ ಗವರ್ನರ್ ಜಗದೀಶ್ ಮುಖಿ, ಅಮರ್ ಸಿಂಗ್ ಸೂರಿ, ಅತುಲೆ ಸೋನಾ, ಕೆ.ಎಸ್. ಪಾಪು, ಮತ್ತು ಸಂಗೀತ್ ಸಿಂಗ್ ಈ ಸಂದರ್ಭ ಉಪಸ್ಥಿತರಿದ್ದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತಿತರರು ರಾಜೇಂದ್ರ ಕುಮಾರ್ ಜೊತೆಗಿದ್ದರು.