ಸರಿಯಾಗಿ ಸ್ಪಂದಿಸದ ಗ್ರಾಮಕರಣಿಕರ ವಿರುದ್ಧ ಗ್ರಾಮಸ್ಥರ ಆಕ್ರೋಶ
ಕನಕಮಜಲು ದ್ವಿತೀಯ ಹಂತದ ಗ್ರಾಮಸಭೆ
ಕನಕಮಜಲು ಗ್ರಾಮಕ್ಕೆ ಲಂಚ ಭ್ರಷ್ಟಾಚಾರ ರಹಿತ ಸೇವೆ ನೀಡುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿಕ್ಕಿದ್ದಾರೆ. ಅಲ್ಲದೇ ಸುದ್ದಿ ಜನಾಂದೋಲನ ವೇದಿಕೆಯವರು ನಡೆಸುತ್ತಿರುವ ಲಂಚ ರಹಿತವಾಗಿ ಉತ್ತಮ ಸೇವೆ ನೀಡುತ್ತಿರುವ ಅಧಿಕಾರಿಯಾಗಿ ನಮ್ಮ ಪಿ.ಡಿ.ಒ. ಅವರು ಜನರಿಂದ ಗುರುತಿಸಲ್ಪಟ್ಟಿದ್ದಾರೆ ಎಂದು ಹೇಳಿದ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಪಿ.ಡಿ.ಒ. ಶ್ರೀಮತಿ ಸರೋಜಿನಿ ಅವರಿಗೆ ಗ್ರಾ.ಪಂ.ನ ಎಲ್ಲಾ ಸದಸ್ಯರು, ಸಿಬ್ಬಂದಿವರ್ಗ ಹಾಗೂ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದರಲ್ಲದೇ, ನಮ್ಮ ಕನಕಮಜಲು ಗ್ರಾಮ ಪಂಚಾಯತಿಯಲ್ಲಿ ಇದುವರೆಗೆ ಲಂಚ ಭ್ರಷ್ಟಾಚಾರಗಳು ನಡೆದಿಲ್ಲ. ಮುಂದೆಯೂ ನಡೆಯೂವುದಿಲ್ಲ. ಲಂಚ ಭ್ರಷ್ಟಾಚಾರಕ್ಕೆ ಇಲ್ಲಿ ನಾವು ಎಲ್ಲಾ ಸದಸ್ಯರು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿ ಕನಕಮಜಲು ಗ್ರಾಮ ಪಂಚಾಯತಿ ಲಂಚ ಭ್ರಷ್ಟಾಚಾರ ಮುಕ್ತ ಗ್ರಾಮ ಪಂಚಾಯತಿ ಎಂದು ನಿರ್ಣಯ ಕೈಗೊಂಡ ಘಟನೆ ಕನಕಮಜಲು ಗ್ರಾಮಸಭೆಯಲ್ಲಿ ವರದಿಯಾಗಿದೆ.
*ಪರ್ಮನೆಂಟ್ ವಿ.ಎ. ನಮಗೆ ಬೇಕು ಗ್ರಾಮಸ್ಥರ ಅಳಲು:*
ಗ್ರಾಮದಲ್ಲಿ ಪರ್ಮನೆಂಟ್ ಗ್ರಾಮಕರಣಿಕರು ಇಲ್ಲ. ಹಾಗಾಗಿ ತಹಶಿಲ್ದಾರ್, ಜಿಲ್ಲಾಧಿಕಾರಿ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಬೇಕೆಂದು ನಿರ್ಣಯ ಕೈಗೊಂಡ ಘಟನೆ ಗ್ರಾಮಸಭೆಯಲ್ಲಿ ವರದಿಯಾಗಿದೆ.
ಈ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯದರ್ಶಿ ರಮೇಶ್ ಟಿ., ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕುದ್ಕುಳಿ, ಸದಸ್ಯರುಗಳಾದ ರವಿಚಂದ್ರ ಕಾಪಿಲ, ಇಬ್ರಾಹಿಂ ಕಾಸಿಂ ಕನಕಮಜಲು, ಶ್ರೀಮತಿ ಪ್ರೇಮಲತಾ ಪಂಜಿಗುಂಡಿ, ಶ್ರೀಮತಿ ಶಾರದಾ ಉಗ್ಗಮೂಲೆ, ಶ್ರೀಮತಿ ಸುಮಿತ್ರ ಕುತ್ಯಾಳ, ಗ್ರಾಮಕರಣಿಕರಾದ ತೇಜಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಅವರು ಸ್ವಾಗತಿಸಿ, ಕಾರ್ಯದರ್ಶಿ ರಮೇಶ್ ವಂದಿಸಿದರು.