ಮರ್ಕಂಜದ ದಾಸರಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿಯ ವಿದ್ಯಾರ್ಥಿಗಳಿಗೆ ಬರವಣಿಗೆ ಪುಸ್ತಕ ಮತ್ತು ಕಲಿಕಾ ಸಾಮಗ್ರಿ ಗಳನ್ನು ಇಂದು(ಮೇ.20) ವಿತರಣಾ ಕಾರ್ಯಕ್ರಮವು ಲಯನ್ಸ್ ಕ್ಲಬ್ ಸುಳ್ಯ ಇವರ ಪ್ರಯೋಜಕತ್ವದಲ್ಲಿ ನಡೆಯಿತು.
ಶಾಲಾ ಮಕ್ಕಳಿಗೆ ಒಂದು ವರ್ಷಕ್ಕೆ ಬೇಕಾಗುವ ಬರವಣಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ಗಳನ್ನು ಲಯನ್ಸ್ ಸಂಸ್ಥೆ ಯ ಅಧ್ಯಕ್ಷ ಆನಂದ ಪೂಜಾರಿ ಯವರು ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಪದ್ಮನಾಭ ಎನ್.ವಿ., ಮರ್ಕಂಜ ಗ್ರಾ.ಪಂ. ಸದಸ್ಯ ಚಿತ್ತರಂಜನ್ ಕೋಡಿ, ಸದಸ್ಯೆ ಗೀತಾ ಹೆಚ್. ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ಪಿ.ಜಿ. ಕಾರ್ಯಕ್ರಮ ನಿರೂಪಿಸಿದರು.