ಅರಂತೋಡು: ಅನ್ವಾರುಲ್ ಹುಧಾ ಶಾದಿಮಹಲ್ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸಂವಿಧಾನ ಇರುವವರೆಗೆ ದೇಶ ಸದೃಢ : ಬಿ.ಕೆ.ಹರಿಪ್ರಸಾದ್

ರಾಷ್ಟ್ರದ ಅಭಿವೃದ್ಧಿಗೆ ಯುವಕರ ಪಾತ್ರ ಮುಖ್ಯ: ಸಲೀಂ ಅಹಮ್ಮದ್

ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಹಕ್ಕಿದೆ. ಸಂವಿಧಾನದಲ್ಲಿ ನಾವು ಸಣ್ಣವರು ದೊಡ್ಡವರು ಎಂಬ ಭೇದಭಾವವಿಲ್ಲ. ಯಾರು ಇದನ್ನು ಕಾಪಾಡಿಕೊಂಡು ಹೋಗುತ್ತಾರೆಯೋ ಅವರಿಗೆ ನಮ್ಮ ಬೆಂಬಲ.

ಸಂವಿಧಾನಕ್ಕೆ ಅಡ್ಡಿಪಡಿಸುವವರನ್ನು ಮುಂದೆ ಬಿಡಲು ಬಿಡಬಾರದು. ಆಗ ಮಾತ್ರ ದೇಶ ಸದೃಢವಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ‌‌. ಹರಿಪ್ರಸಾದ್ ಅವರು ಹೇಳಿದರು.
ಅರಂತೋಡಿನಲ್ಲಿ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ವತಿಯಿಂದ ನೂತನವಾಗಿ ನಿರ್ಮಿಸಿದ ಅನ್ವಾರುಲ್ ಹುಧಾ ಶಾದಿಮಹಲನ್ನು ವಿದಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮೇ.20ರಂದು ಉದ್ಘಾಟಿಸಿದಸಭಾಂಗಣವನ್ನು ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಅವರು ಉದ್ಘಾಟಿಸಿ, ಮಾತನಾಡಿ ರಾಷ್ಟ್ರದ ಅಭಿವೃದ್ಧಿ ಯುವಕರ ಕೈಯಲ್ಲಿದೆ. ಯುವ ಸಂಘಟನೆಗಳ ಕಾರ್ಯದ ಫಲವೇ ಇಂತಹ ಕಟ್ಟಡದ ನಿರ್ಮಾಣ ಸಾಧ್ಯವಾಗಿದೆ. ಯುವಕರು ಜವಾಬ್ದಾರಿ ಹೊತ್ತು ಕೆಲಸ ಮಾಡಿದಾಗ ಸುಂದರ ರಾಷ್ಟ್ರದ ನಿರ್ಮಾಣವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಹೇಳಿದರು. ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಗೌರವಾಧ್ಯಕ್ಷ ಟಿ‌.ಎಂ. ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷ ಟಿ.ಎಂ. ಬಾಬ ತೆಕ್ಕಿಲ್, ಅಹಮ್ಮದ್ ಕುಂಞಿ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕೆ.ಪಿ.ಸಿ.ಸಿ‌. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ, ಕೆ.ಪಿ.ಸಿ.ಸಿ. ಸಂಯೋಜಕ ಕೃಷ್ಣಪ್ಪ, ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ, ಅರಂತೋಡು ಎನ್ನೆಂಸಿ ನಿವೃತ್ತ ಉಪನ್ಯಾಸಕ ಎ.ಎ. ಅಬ್ದುಲ್ಲ ಮಾಸ್ಟರ್, ಅರಂತೋಡು ಗ್ರಾ.ಪಂ.ಸದಸ್ಯ ಶಿವಾನಂದ ಕುಕ್ಕುಂಬಳ, ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಅರಂತೋಡು ಬಿ.ಜೆ.ಎಂ.ಅಧ್ಯಕ್ಷ ಅಶ್ರಫ್ ಗುಂಡಿ, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಸ್ಥಾಪಕ ಕಾರ್ಯದರ್ಶಿ ಹಾಜಿ ಅಹಮ್ಮದ್ ಕುಂಞಿ ಪಟೇಲ್ , ಅರಂತೋಡು ಬಿ.ಜೆ.ಎಂ. ಪ್ರ.ಕಾರ್ಯದರ್ಶಿ ಕೆ.ಎಂ. ಮೂಸಾನ್, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಆಶಿಕ್ ಕುಕಅರಂತೋಡುಉಪಸ್ಥಿತರಿದ್ದರು. ಅರಂತೋಡು ಬಿ.ಜೆ.ಎಂ. ಖತೀಬರಾದ ಅಲ್ ಹಾಜಿ ಇಸಾಖ್ ಬಾಖವಿ ದುವಾ ನೆರವೇರಿಸಿದರು. ಟಿ.ಎಂ. ಶಹೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಟಿ.ಎಂ. ಬಾಬ ತೆಕ್ಕಿಲ್, ಅಹ್ಮದ್ ಕುಂಞಿ ಪಟೇಲ್, ಟಿ.ಎಂ.ಶಹೀದ್, ಅಬ್ದುಲ್ ಮಜೀದ್, ಗುತ್ತಿಗೆದಾರ ಹನೀಫ್ ಅವರನ್ನು ಸನ್ಮಾನಿಸಲಾಯಿತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.