ಸಂಪಾಜೆ: ಗ್ರಾ.ಪಂ. ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಸವಲತ್ತುಗಳ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

*ಗ್ರಾಮಸ್ವರಾಜ್ಯದಿಂದ ಗ್ರಾಮಾಭಿವೃದ್ಧಿ: ಬಿ.ಕೆ.ಹರಿಪ್ರಸಾದ್*

*ವಿಶೇಷ ಅನುದಾನ ತಂದು ಗ್ರಾಮಾಭಿವೃದ್ಧಿ ಮಾಡುವ ಹಮೀದ್ ಅವರಲ್ಲಿ ನಾಯಕತ್ವ ಗುಣವಿದೆ: ಸಲೀಂ ಅಹ್ಮದ್*

ಸಂಪಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಮತ್ತು  ಗಡಿಕಲ್ಲು ನೂತನ ಅಂಗನವಾಡಿ ಕಟ್ಟಡ ಹಾಗೂ ಘನತ್ಯಾಜ್ಯ ಘಟಕದ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವು ಮೇ.20ರಂದು ಸಂಪಾಜೆ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಮೇ.20ರಂದು ಸಂಜೆ ನಡೆಯಿತು.

ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಶಾಹುಲ್ ಹಮೀದ್ ಅವರು ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮವನ್ನು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಉದ್ಘಾಟಿಸಿ , ಮಾತನಾಡಿ ಮಹಾತ್ಮ ಗಾಂಧಿಯವರ ಕಲ್ಪನೆಯ ಗ್ರಾಮಸ್ವರಾಜ್ಯದ ಮೂಲಕ ಗ್ರಾಮದ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಸುಮಾರು ಹದಿನೈದು ಲಕ್ಷ ಮಹಿಳೆಯರಿಗೆ ಗ್ರಾ.ಪಂ. ಮಟ್ಟದಲ್ಲಿ ಅವಕಾಶ ನೀಡಲಾಗಿದೆ. ಮಹಿಳಾ ಸಬಲೀಕರಣದ ಮೂಲಕ ಗ್ರಾಮಾಭಿವೃದ್ಧಿ ಸಾಧ್ಯ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕಷ್ಟಪಟ್ಟು ಸರಕಾರಗಳಿಗೆ ಕಟ್ಟುವ ತೆರಿಗೆಯ ಹಣವನ್ನು ಇಂತಹ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗ ಮಾಡಿಕೊಂಡಾಗ ಗ್ರಾಮಸ್ವರಾಜ್ಯ ಸಾಧ್ಯ ಎಂದು ಹೇಳಿದರು.
ಇನ್ನೋರ್ವ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಮಾತನಾಡಿ ಯುವ ನಾಯಕ ಹಾಗೂ ಈ ಗ್ರಾ.ಪಂ.ನ ಅಧ್ಯಕ್ಷರಾಗಿರುವ  ಹಮೀದ್ ಅವರು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು , ಜ‌ನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಗ್ಗೂಡಿಸಿ ಗ್ರಾಮದ ಅಭಿವೃದ್ಧಿ ಮಾಡಿದ್ದಾರೆ. ಅವರಲ್ಲಿ ನಿಜವಾದ ನಾಯಕತ್ವದ ಗುಣಗಳಿವೆ. ಸರಕಾರಗಳು ಗ್ರಾಮ ಪಂಚಾಯತಿಗಳಿಗೆ ಶಕ್ತಿ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ಮಾಜಿ ಜಿ.ಪಂ. ಸದಸ್ಯ ಭರತ್ ಮುಂಡೋಡಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಡಾ. ಡಿ.ವಿ.ಲೀಲಾಧರ್, ಕೊಡಗು ಕಾಂಗ್ರೆಸ್ ಮಾಜಿ ಎಡಿಶನಲ್ ಅಡ್ವಕೇಟ್ ಜನರಲ್ ಪೊನ್ನಣ್ಣ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಮಾಜಿ ಗ್ರಾ.ಪಂ‌. ಅಧ್ಯಕ್ಷೆ ಶ್ರೀಮತಿ ಯಮುನ ಬಿ.ಎಸ್., ಮಾಜಿ ಗ್ರಾ. ಅಧ್ಯಕ್ಷರುಗಳಾದ ಕೆ.ಪಿ. ಜಗದೀಶ್,  ಜಗದೀಶ್ ರೈ ಸಂಪಾಜೆ, ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಗಣಪತಿ ಭಟ್ ಗೂನಡ್ಕ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಂದರಿ ಮುಂಡಡ್ಕ, ಕೆ‌.ಪಿ.ಸಿ.ಸಿ. ಸಂಯೋಜಕ ಕೃಷ್ಣಪ್ಪ, ಗ್ರಾ.ಪಂ.‌ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಓಲ್ಗಾ ಡಿಸೋಜ, ಕೆ.ಪಿ.ಸಿ.ಸಿ. ಪ್ರ.ಕಾರ್ಯದರ್ಶಿ ಧನಂಜಯ ಅಡ್ಪಂಗಾಯ  ಉಪಸ್ಥಿತರಿದ್ದರು. ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಸ್ವಾಗತಿಸಿ, ಜಗದೀಶ್ ರೈ ಸಂಪಾಜೆ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.