ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ, ಸುಳ್ಯ ತಾಲೂಕು ಅಲ್ಪಸಂಖ್ಯಾತ ಘಟಕದ ಜಂಟಿ ಆಶ್ರಯದಲ್ಲಿ ಅರಂತೋಡು ತಾ.ಪಂ. ಕ್ಷೇತ್ರ ವ್ಯಾಪ್ತಿಯ ಅಲ್ಪಸಂಖ್ಯಾತ ಘಟಕದ ಪದಗ್ರಹಣ ಸಮಾರಂಭವು ಸಂಪಾಜೆಯ ಬೀಜದಕಟ್ಟೆ ಸೈದು ಹಾಜಿ ವೇದಿಕೆಯಲ್ಲಿ ಮೇ.20ರಂದು ರಾತ್ರಿ ಜರುಗಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಪಾಜೆ ವಲಯ ಅಧ್ಯಕ್ಷ ರಹೀಂ ಬೀಜದಕಟ್ಟೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ಧೇಶಿಸಿ, ಮಾತನಾಡಿದರು.
ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಚಿತ್ತರಂಜನ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಶಾಹುಲ್ ಹಮೀದ್,ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ,
ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಮಾಜಿ ಜಿ.ಪಂ. ಸದಸ್ಯ ಭರತ್ ಮುಂಡೋಡಿ, ಸಿದ್ಧೀಕ್ ಕೊಕ್ಕೋ, ರಹೀಂ ಬೀಜದಕಟ್ಟೆ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಶ್ರೀಮತಿ ಗೀತಾ ಕೋಲ್ಚಾರು, ಸುರೇಶ್ ಅಮೈ, ಶೌವಾದ್ ಗೂನಡ್ಕ, ಜಗದೀಶ್ ರೈ ಸಂಪಾಜೆ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪಿ.ಎಸ್. ಗಂಗಾಧರ, ಹಮೀದ್ ಕುತ್ತಮೊಟ್ಟೆ, ಎಸ್.ಕೆ. ಹನೀಫ್, ಶ್ರೀಮತಿ ಸುಂದರಿ ಮುಂಡಡ್ಕ ,ಯಮುನ ಬಿ.ಎಸ್.ಕೀರ್ತನ್ ಕೊಡಪಾಲ ಸೇರಿದಂತೆ ಸಂಪಾಜೆ ಗ್ರಾ.ಪಂ.ನ ಕಾಂಗ್ರೆಸ್ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಸ್ವಾಗತಿಸಿ, ಎಸ್. ಕೆ. ಹನೀಫ್ ವಂದಿಸಿದರು. ಜಿ.ಕೆ. ಹಮೀದ್ ಕಾರ್ಯಕ್ರಮ ನಿರೂಪಿಸಿದರು.