ಸುಳ್ಯ ಕಲ್ಲುಮುಟ್ಲುವಿನ ನಗರ ಪಂಚಾಯತ್ ಕುಡಿಯುವ ನೀರಿನ ಪಂಪ್ ಹೌಸ್ ಬಳಿ ಭೂ ಕುಸಿತ ಉಂಟಾಗಿರುವ ಪ್ರದೇಶಕ್ಕೆ ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಮೇ.20ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೂ ಕುಸಿತ ಪ್ರದೇಶ ಮತ್ತು ನದಿ ನೀರಿಗೆ ಮುಳುಗಡೆ ಗೊಂಡು ಕಾಮಗಾರಿ ಸ್ಥಗಿತಗೊಂಡಿರುವುದನ್ನು ವೀಕ್ಷಿಸಿದ ಅವರು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್ಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಜಾಕ್ವೆಲ್ ಕಾಮಗಾರಿ ತಡವಾಗಿರುವುದಕ್ಕೆ ತೀವ್ರ ತರಾಟೆಗೆತ್ತಿಕೊಂಡರು.
ಕಾಮಗಾರಿ ಮಾಡಲು ಇಷ್ಟು ವಿಳಂಬ ಮಾಡಿರುವುದು ಏಕೆ? ತಡ ಆಗಿರುವುದರಿಂದ ಈಗ ಮಳೆ ಬಂದು ಸಮಸ್ಯೆ ಆಗಿದೆ. ಕೆಲಸ ಇನ್ನಷ್ಟು ವಿಳಂಬ ಮಾಡಲು ಯಾವುದೇ ಸಬೂಬು ಬೇಡ. ಎಲ್ಲಾ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಂಡು ಆದಷ್ಟು ಬೇಗ ಜಾಕ್ವೆಲ್ ಕಾಮಗಾರಿ ಪೂರ್ತಿ ಮಾಡಬೇಕು ” ಎಂದು ತಾಕೀತು ಮಾಡಿದರು. ಜಾಕ್ವೆಲ್ ಕಾಮಗಾರಿಯ ಸಂಪೂರ್ಣ ಮಾಹಿತಿ, ಕಾಮಗಾರಿಯ ಪ್ರಗತಿ ವಿವರದೊಂದಿಗೆ ಮೇ.21ರಂದು ತಮ್ಮನ್ನು ಭೇಟಿ ಮಾಡಿ ಮಾಹಿತಿ ನೀಡುವಂತೆ ಅವರು ಇಂಜಿನಿಯರ್ಗಳಿಗೆ ಮತ್ತು ಸಂಬಂಧಪಟ್ಟವರಿಗೆ ಸೂಚಿಸಿದರು.
ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನ.ಪಂ.ಸದಸ್ಯ ಬೂಡು ರಾಧಾಕೃಷ್ಣ ರೈ, ಬಿಜೆಪಿ ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಪ್ರಮುಖರಾದ ಹರೀಶ್ ರೈ ಉಬರಡ್ಕ, ಜಿನ್ನಪ್ಪ ಪೂಜಾರಿ,ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್. ಉಪಸ್ಥಿತರಿದ್ದರು.