ಸುಳ್ಯ ಸೈಂಟ್ ಜೋಸೆಫ್ ಶಾಲೆಯ ಎಸ್.ಎಸ್.ಎಲ್.ಸಿಯಲ್ಲಿ ಪ್ರಿಮಲ್ ವೆನಿಷಾ ಡಿಸೋಜಾಗೆ 624 ಅಂಕ ಬಂದಿದ್ದು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ.
ಈಕೆಯನ್ನು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರರವರು ಅವರ ಚಿಕ್ಕಿನಡ್ಕ ಮನೆಗೆ ತೆರಳಿ ಶಾಲು ಹೊದಿಸಿ,ಫಲ,ಪುಷ್ಪ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತಂದೆ ಚಿಕ್ಕಿನಡ್ಕ ಮರಿಯಾ ಕೃಪಾ ಟ್ರಾನ್ಸ್ ಪೋರ್ಟ್ ನ ಮಾಲಕರಾದ ಪ್ರೇಮ್ ಪ್ರಕಾಶ್, ತಾಯಿ ವೀಣಾ ಮೊಂತೆರೋ , ಚೊಕ್ಕಾಡಿ ಸೊಸೈಟಿ ನಿರ್ದೇಶಕ ರಾಧಾಕೃಷ್ಣ ಬೊಳ್ಳೂರು,ಹರೀಶ್ ಕಂಜಿಪಿಲಿ, ಚೊಕ್ಕಾಡಿ ಸೊಸೈಟಿ ನಿರ್ದೇಶಕ ಅರುಣ್ ನಾಯರ್ ಕಲ್ಲು, ಶಿವರಾಮ ಕೆರೆಮೂಲೆ, ಗಣೇಶ್ ಪಿಲಿಕಜೆ ಮೊದಲಾದವರು ಉಪಸ್ಥಿತರಿದ್ದರು.