ಇಂಜಿನಿಯರ್ ಶಿವಕುಮಾರ್ ಮೈಸೂರಿಗೆ ವರ್ಗಾವಣೆ
ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಅವರಿಗೆ ಬಂಟ್ವಾಳ ಪುರಸಭೆಗೆ ಹಾಗು ಕಿರಿಯ ಇಂಜಿನಿಯರ್ ಶಿವಕುಮಾರ್ ಅವರಿಗೆ ಮೈಸೂರು ಜಿಲ್ಲೆಯ ಶ್ರೀರಾಂಪುರ ಪಟ್ಟಣ ಪಂಚಾಯತ್ಗೆ ವರ್ಗಾವಣೆಯಾಗಿದ್ದಾರೆ.
ಎಂ.ಆರ್.ಸ್ವಾಮಿ
ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ವರ್ಗಾವಣೆಯಿಂದ ತೆರವಾಗುವ ಸ್ಥಾನಕ್ಕೆ ಯಾರನ್ನೂ ನಿಯೋಜನೆ ಮಾಡಿಲ್ಲ. ಮೈಸೂರಿನವರಾದ ಎಂ.ಆರ್.ಸ್ವಾಮಿ ಕಳೆದ 20 ತಿಂಗಳಿನಿಂದ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಸುಳ್ಯ ನಗರ ಪಂಚಾಯತ್ನ ಮುಖ್ಯಾಧಿಕಾರಿಯಾಗಿ 13 ತಿಂಗಳು ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಸುಬ್ರಹ್ಮಣ್ಯದವರಾದ
ಎಂ.ಆರ್.ಶಿವಕುಮಾರ್ ಅವರು 6 ವರ್ಷಗಳಿಂದ ಸುಳ್ಯ ನಗರ ಪಂಚಾಯತ್ನ ಕಿರಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಜೊತೆಗೆ ಕಡಬ, ವಿಟ್ಲ ನಗರ ಪಂಚಾಯತ್ನ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಶಿವಕುಮಾರ್
ಇಬ್ಬರೂ ತಮ್ಮ ಕೋರಿಕೆಯ ಮೇರೆಗೆ ವರ್ಗಾವಣೆ ಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎಂ. ಆರ್. ಸ್ವಾಮಿಯವರು ಸೋಮವಾರ ಬಂಟ್ವಾಳಕ್ಕೆ ತೆರಳಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.