2022-23 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಡಿಕೆ ಹಳದಿ ಎಲೆ ರೋಗಕ್ಕೆ ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹಧನ ಕಾರ್ಯಕ್ರಮದಡಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುವುದು.
ಸದರಿ ಕಾರ್ಯಕ್ರಮದಡಿ ಕೊಡಿಯಾಲ, ನೆಲ್ಲೂರು ಕೆಮ್ರಾಜೆ, ಉಬರಡ್ಕ ಮಿತ್ತೂರು, ಸಂಪಾಜೆ, ಅರಂತೋಡು, ಕೊಲ್ಲಮೊಗ್ರ, ಆಲೆಟ್ಟಿ, ಮರ್ಕಂಜ ಹಾಗೂ ಮಡಪ್ಪಾಡಿ ಗ್ರಾಮದ ಅಡಿಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶದ ರೈತರಿಗೆ ವಿವಿದ ಬೆಳೆ ಬೆಳೆದಲ್ಲಿ ಶೇಕಡ 50 ರಂತೆ ಹೆಕ್ಟೇರ್ ಗೆ ತೆಂಗು (ರೂ. 30,212), ತಾಳೆಬೆಳೆ (ರೂ. 22530), ಕಾಳುಮೆಣಸು (ರೂ. 66142), ಕೊಕ್ಕೋ (ರೂ. 40005), ಬಾಳೆ TC (ರೂ. 88017), ಕಾಫಿ Rubosta (ರೂ. 33653), ಕಾಫಿ Dwarf Arabica (ರೂ. 121316), ದಾಲ್ಚಿನ್ನಿ (ರೂ. 84756), ರಾಂಬೂಟನ್ (ರೂ. 34550) ಹಾಗೂ ಜಾಯಿಕಾಯಿ (ರೂ. 44310) ರಂತೆ ಸಹಾಯಧನ ಲಭ್ಯವಿದ್ದು ಆಸಕ್ತ ಅಡಿಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶದ ರೈತರು ಅರ್ಜಿಯನ್ನು ಗ್ರಾಮ ಪಂಚಾಯತ್ ನಿಂದ ಪಡೆದು ಮೇ. 31 ರೊಳಗೆ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಅನುಮೋದಿತ ಸಂಸ್ಥೆ / ನರ್ಸರಿಯಿಂದ ಗಿಡ ಖರೀದಿ ಮಾಡಿದ ಬಿಲ್ಲು ನೀಡಿದ್ದಲ್ಲಿ ಸಹಾಯಧನ ನೀಡಲಾಗುವುದು ಹಾಗೂ ದಿನಾಂಕ ಮೇ.23 ರಂದು ಪೂರ್ವಾಹ್ನ 10.00 ಕ್ಕೆ ಆಲೆಟ್ಟಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಹಾಗೂ ಮೇ. 24 ರಂದು ಪೂರ್ವಾಹ್ನ 10.00 ಗಂಟೆಗೆ ಮರ್ಕಂಜ ಗ್ರಾಮ ಪಂಚಾಯತ್ ಸಭಾಭವನ ಅಪರಾಹ್ನ 2.30 ಕ್ಕೆ ಮಡಪ್ಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅಡಿಕೆ ಹಳದಿ ರೋಗದ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ರೈತರು ಸದರಿ ಕಾರ್ಯಕ್ರಮದ ಸದುಪಯೋಗವನ್ನು ಪಡೆಯಲು ಈ ಮೂಲಕ ಕೋರಿದೆ.