ಲೇಖನ – ಕಲಿಕೆಗೆ ಪೂರಕ ಹೊಸತನದ ಪ್ರಯೋಗ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”…ಹೌದು ಕೋವಿಡ್ ಹತ್ತೊಂಬತ್ತು ಜಗತ್ತಿಗೆ ಮನುಷ್ಯನನ್ನು ಅಲ್ಲದೆ ಜಗದ ಪ್ರತಿ ಜೀವಿಗೂ ಎದೆಯೊಳಗೆ ನಡುಕ ಹುಟ್ಟಿಸಿದ್ದಂತೂ ನಿಜ. ಕೋವಿಡ್ ಸಂದರ್ಭದಲ್ಲಿ ಅತೀ ಹೆಚ್ಚು ಪರಿಣಾಮ ಬೀರಿದ್ದು ಅಂಬೆಗಾಲಿಡಿದು ಶಾಲೆಗೆ ಬರುವ ಮಕ್ಕಳಿಂದ ಹಿಡಿದು ಉನ್ನತ ವಿದ್ಯಾಭ್ಯಾಸದ ಮಕ್ಕಳಿಗೆ. ಬೆಳೆಯುವ ಮಕ್ಕಳು ಹಸಿಗೋಡೆಗಳಿದ್ದಂತೆ. ಯಾವುದೇ ವಿಷಯವನ್ನು ಬೇಗನೆ ಗ್ರಹಿಸಿಕೊಳ್ಳುವ ಶಕ್ತಿಯಿರುವವರು. ದಿನದಿಂದ ದಿನಕ್ಕೆ ಹೊಸತನವನ್ನು ಹುಡುಕುವ, ಹೊಸತನವನ್ನು ಕಲಿಯುವ ಮುದ್ದು ಮಕ್ಕಳ ಮನಸ್ಸು ಚಂಚಲವಾಗಿರುತ್ತದೆ. ಇಂತಹ ಮಕ್ಕಳನ್ನು ಪೋಷಕರು ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳಲಾರದೆ ಪರಿತಪಿಸಿದ ಸಂಕಟ ಅಷ್ಟಿಷ್ಟಲ್ಲ.

ಟಿವಿ, ಮೊಬೈಲ್ ,ಮನೆಯ ಅಂಗಳ ಇಷ್ಟೇ ಪ್ರಪಂಚವಾಗಿದ್ದ ಮಕ್ಕಳನ್ನು ಮನೆಯಲ್ಲಿ ಸಂಭಾಳಿಸುವುದೇ ಕಷ್ಟವಾಗಿತ್ತು. ಮನೆಯೊಳಗಿನ ವ್ಯವಸ್ಥೆ ಮೊದಲ ಪಾಠ ಶಾಲೆ. ಹೆತ್ತವರೇ ಮೊದಲ ಗುರುಗಳು. ಆದರೂ ಮಗುವಿನ ಸರ್ವಾಂಗೀಣ ಅಭಿವೃದ್ದಿ ಗೆ ಹೊರಗಿನ ಪ್ರಪಂಚ ಅಗತ್ಯ. ಇದರಿಂದಾಗಿ ಶಿಕ್ಷಕರ ಪ್ರಾಮುಖ್ಯತೆ ಹೆಚ್ಚಾಯಿತು. ಶಾಲೆಗಳಲ್ಲಿ ಪ್ರಾರಂಭವಾದ ವಿದ್ಯಾಗಮ ಕಾರ್ಯಕ್ರಮವು ಮಕ್ಕಳಿಗೆ ಶಿಕ್ಷಣದಲ್ಲಿ ಚೇತರಿಕೆಯನ್ನು ನೀಡಿತು. ಶಿಕ್ಷಕರು ಕಾಯಾ ,ವಾಚಾ,ಮನಸಾ ದುಡಿದರು. ವಿದ್ಯಾಗಮವು ನೆಲೆ ಸಿಕ್ಕಲ್ಲಿ ಪಾಠ ಮಾಡುವಂತಾಯಿತು. ಶಿಕ್ಷಕರ ಮನಃಪಟಲದಲ್ಲಿ ಅಚ್ಚಳಿಯದೆ ಉಳಿಯುವಂತಾಯಿತು. ಕೋವಿಡ್ ೧೯ ಶಿಕ್ಷಣದ ವ್ಯವಸ್ಥೆಗೂ ,ಜನವ್ಯವಸ್ಥೆಗೂ ಕೊಡಲಿಯೇಟು ಬಿದ್ದಂತಾಯಿತು. ಚಂದನ ಟಿವಿಯಲ್ಲಿ ಸಂವೇದ ವೀಡಿಯೋ ಪಾಠಗಳನ್ನು ಇಲಾಖೆಯು ಬಿತ್ತರಿಸಿ ಮಕ್ಕಳಿಗೆ ಉಪಯೋಗವಾಗುವಂತೆ ಮಾಡಿತು. ನಂತದರಲ್ಲಿ ಇಲಾಖೆಯು ಆನ್ಲೈನ್ ತರಗತಿಗಳನ್ನು ಆರಂಭಿಸಿದ ಪರಿಣಾಮವಾಗಿ ಇದರ ಪ್ರಯೋಜನ ಪೇಟೆಯ ಮಕ್ಕಳಿಗೆ ಕೈಗೆಟಕುವಂತಾದರೂ ಹಳ್ಳಿಯ ಹೆಚ್ಚಿನ ಮಕ್ಕಳಿಗೆ ನೆಟ್ವರ್ಕ್ ಸಮಸ್ಯೆಯಿಂದ ವಂಚಿತರಾದರು. ಈ ಎಲ್ಲಾ ದೋಷಗಳಿಂದ ಪರಿಹಾರ ಹೊಂದಲು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಆಶಯದಂತೆ 1-3ನೇ ತರಗತಿಗೆ ವಿದ್ಯಾಪ್ರವೇಶವನ್ನು ಆಡುತ್ತಾ ಕಲಿಯುವ ಶಾಲಾ ಸಿದ್ಧತಾ ಕಾರ್ಯಕ್ರಮ. 4-9ನೇ ತರಗತಿಗೆ ಕಲಿಕಾ ಚೇತರಿಕೆ ಎಂಬ ಕಲಿಕಾ ಚಟುವಟಿಕೆಯನ್ನು ಹಮ್ಮಿಕೊಳ್ಳಲು ಸಿದ್ಧತೆಯನ್ನು ಮಾಡಿಕೊಂಡಿದೆ ಇದು ಕೋವಿಡ್ ಹತ್ತೊಂಬತ್ತರಿಂದಾಗಿ ಕಲಿಕೆಯಲ್ಲಿ ಆಗಿರುವ ಕೊರತೆಯನ್ನು ನೀಗಿಸಲು ಆಯಾಯ ತರಗತಿಗೆ ಸಂಬಂಧಿಸಿದ ಸಾಮರ್ಥ್ಯವನ್ನು ಪಡೆಯಲು ಇದು ಸಹಕಾರಿಯಾಗಲಿದೆ. ಇದನ್ನು ಕಲಿಕಾ ಹಾಳೆ ಮತ್ತು ಪಠ್ಯವನ್ನು ಬಳಸಿಕೊಂಡು ಜ್ನಾನವನ್ನು ಕಟ್ಠಿಕೊಳ್ಳಲು ಮತ್ತು ಕಲಿಕಾ ಸಾಮರ್ಥ್ಯ ಗಳಿಸಲು ಶಿಕ್ಷಕರು ಸುಗಮಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅದರ ಜೊತೆಯಲ್ಲಿ ಮಕ್ಕಳಲ್ಲಿ ಧೈರ್ಯ, ಮನರಂಜನೆ, ಕಲಿಕೆಯ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಮಳೆಬಿಲ್ಲು ಕಾರ್ಯಕ್ರಮವನ್ನು ಶಾಲೆಗಳಲ್ಲಿ ಹದಿನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಹೊಸ ಕಲಿಕಾ ಚಟುವಟಿಕೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆಟದ ಹಬ್ಬ, ಆಟಿಕೆ ತಯಾರಿಕೆ, ನಾಟಕದ ಹಬ್ಬ, ಚಿತ್ತಾರ ಕಲಾ ಹಬ್ಬ, ಚಿತ್ರಜಗತ್ತು, ಕಥೆಗಳ ಹಬ್ಬ, ಕವಿತೆ ಕಟ್ಟೋಣ ಹಾಡು ಹಾಡೋಣ, ಪರಿಸರ ಹಬ್ಬ,ಗಣಿತದ ಗಮ್ಮತ್ತು, ಇತಿಹಾಸದ ಹಬ್ಬ ನಾವಿನ್ನೂ ಮರೆತಿಲ್ಲ, ಅಡುಗೆ ಮನೆಯಲ್ಲಿ ವಿಜ್ಞಾನ, ಗೊಂಚಲು ಸಾಂಸ್ಕೃತಿಕ ಸಂಭ್ರಮ, ಶಾಲೆ ಸಿಂಗಾರ ಇಂತಹ ಚಟುವಟಿಕೆಗಳು ಶಾಲಾರಂಭದಿಂದ ಹದಿನಾಲ್ಕು ದಿನಗಳ ಕಾಲ ವಿಶೇಷ ಕಾರ್ಯಕ್ರಮವಾಗಿರುತ್ತದೆ.

ಒಂದರಿಂದ ಮೂರನೇ ತರಗತಿಯ ಮಕ್ಕಳಿಗೆ ವಿದ್ಯಾಪ್ರವೇಶವು ಅಭಿವೃದ್ಧಿ ಗುರಿ ಆಧರಿಸಿದ ಸಾಮರ್ಥ್ಯ ಮತ್ತು ಕಲಿಕಾ ಫಲಗಳನ್ನು ಹೊಂದಿದೆ. ವಿದ್ಯಾಪ್ರವೇಶದಲ್ಲಿ ೮ ಚಟುವಟಿಕಾ ಮೂಲೆಗಳಲ್ಲಿ ಇಡಬಹುದಾದ ಕಲಿಕಾಸಾಮಗ್ರಿಗಳನ್ನು ಜೋಡಿಸಿಟ್ಟು ತರಗತಿ ನಡೆಸಲಾಗುತ್ತದೆ. ಇದರಲ್ಲಿ ಬಿಲ್ಡಿಂಗ್ ಬ್ಲಾಕ್ಸ್ ಮೂಲೆ, ಗಣಿತ ಮೂಲೆ, ಕಲೆಗೊಂದು ನೆಲೆ/ಕರಕುಶಲ ಮೂಲೆ, ಬರೆಯುವ ಮೂಲೆ,ಆಟಿಕೆ /ಮಾಡಿಕಲಿ ಮೂಲೆ, ಅನ್ವೇಷಣಾ ಮೂಲೆ, ಗೊಂಬೆ ಮೂಲೆ, ಗ್ರಂಥಾಲಯ /ಓದುವ ಮೂಲೆ ಇಂತಹ ಚಟುವಟಿಕೆಗಳು ನೋಡಿ, ಮಾಡಿ ,ಅನ್ವೇಷಣಾ ಕೌಶಲ, ಅನುಭವಿಸಿ ಕಲಿಯುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಸಹಕಾರಿಯಾಗಲಿದೆ.ಉತ್ತಮ ಆರೋಗ್ಯ,ಆಟಗಳು,ಉತ್ತಮ ಪರಿಸರ, ಸಂವಹನ ಇವುಗಳು ಲವಲವಿಕೆಯಿಂದ ತೊಡಗಿಸಿಕೊಳ್ಳಲು ಮತ್ತು ಕ್ರಿಯಾಶೀಲ ಕಲಿಕಾರ್ಥಿಗಳನ್ನಾಗಿಸಲು ಸಹಾಯಕವಾಗಿದೆ. ಪೋಷಕರು ಈ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಹೆಚ್ಚಾಗಲಿದೆ.ಮಕ್ಕಳ ಕಲಿಕೆಗೆ ಮತ್ತು ಜ್ಞಾನ ಸಂವರ್ಧನೆಗೆ ಪೂರಕವಾಗಿ ಈ ಎಲ್ಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ. ಅದರಂತೆ ರಾಜ್ಯಮಟ್ಟದಿಂದ ಹಿಡಿದು ಸ್ಥಳೀಯ ಹಂತದವರೆಗೆ ಶಿಕ್ಷಕರಿಗೆ ಉತ್ತಮವಾದ ತರಬೇತಿಯನ್ನು ನೀಡಲಾಗಿದೆ.ಹೆಚ್ಚು ಹೆಚ್ಚು ಸಂಪನ್ಮೂಲ ಹೊಂದಿರುವ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ನೀಡಲು ಕಟಿಬಧ್ಧರಾಗಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.
ಸರ್ಕಾರದ ಹಲವಾರು ಯೋಜನೆಗಳು, ಕಾರ್ಯಕ್ರಮಗಳ ಮಧ್ಯೆ ಜೊತೆಯಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ತನ್ನ ಶಕ್ತಿ ಮೀರಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಇದ್ದಾರೆ . ಅಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಸಮುದಾಯದ ಶಿಕ್ಷಣ ತಜ್ಞರನ್ನು ,ಸ್ವಯಂ ಸೇವಕರನ್ನು ಬಳಸಿಕೊಂಡು ಮಕ್ಕಳ ಕಲಿಕೆಗೆ ಇನ್ನಷ್ಟು ಶಕ್ತಿಯನ್ನು ತುಂಬಲು ಸಹಕಾರಿಯಾಗಲಿದೆ. ಒಟ್ಟಿನಲ್ಲಿ ಮಕ್ಕಳಲ್ಲಿ ಬುನಾದಿ ಅಕ್ಷರ ಮತ್ತು ಸಂಖ್ಯಾ ಜ್ಞಾನದ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ಮತ್ತು ವಿದ್ಯಾಪ್ರವೇಶ ಮಕ್ಕಳಿಗೆ ಸಹಕಾರಿಯಾಗಲಿದೆ. ಸಮುದಾಯ, ಪೋಷಕರು ಸದಾ ಶಿಕ್ಷಕರ ಜೊತೆಯಾಗಿ ನಿಲ್ಲಬೇಕು ಮತ್ತು ಸಹಕಾರವು ಅಗತ್ಯ. ಮಕ್ಕಳ ಮೇಲಿನ ಕಾಳಜಿಯಲ್ಲಿ ಸರಕಾರ ಹಮ್ಮಿಕೊಂಡ ಕಾರ್ಯ ಚಟುವಟಿಕೆಗಳು ಯಶಸ್ವಿಯಾಗಲು ಮತ್ತು ಸರಕಾರಿ ಶಾಲೆಯ ಸಬಲೀಕರಣಕ್ಕಾಗಿ ತಾವೆಲ್ಲರೂ ನಮ್ಮ ಜೊತೆ ಇರುವಿರಿ ಎಂಬ ನಂಬುಗೆಯಲ್ಲಿ..

ಮಮತಾ ಕೆ.,
ಶಿಕ್ಷಕಿ
ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕೊಡಿಯಾಲ

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.