ಸಂಪಾಜೆ ಗ್ರಾಮದ ಗೂನಡ್ಕದ ದೊಡ್ಡಡ್ಕ ಶ್ರೀ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಸ್ವಾಮಿ ಕೊರಗಜ್ಜ ದೈವದ ಕೋಲದೊಂದಿಗೆ ಕೊರಗಜ್ಜ ದೈವದ ನೂತನ ವಿಗ್ರಹ ಪ್ರತಿಷ್ಠೆಯು ಮೇ.21ರಂದು ಜರುಗಿತು.
ಬೆಳಿಗ್ಗೆ ಗಣಪತಿ ಹೋಮ, ಗುಳಿಗ ಕಟ್ಟೆಯ ಪ್ರತಿಷ್ಠೆ ನಡೆದು ಸ್ವಾಮಿ ಕೊರಗಜ್ಜ ದೈವದ ಕೋಲದೊಂದಿಗೆ ನೂತನ ವಿಗ್ರಹ ಪ್ರತಿಷ್ಠೆ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರು, ಸೇವಾಕರ್ತರು, ಆಧ್ಯಕ್ಷರು , ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.