ಸುಬ್ರಹ್ಮಣ್ಯ ಗ್ರಾಮದ ನಿವಾಸಿ ಆದಿ ಸುಬ್ರಹ್ಮಣ್ಯ ಬಳಿಯವರಾಗಿದ್ದು, ಸುಬ್ರಹ್ಮಣ್ಯ ಗ್ರಾಂ.ಪಂ ನ ಹಾಲಿ ಸದಸ್ಯ ದಿನೇಶ್ ರಾವ್ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.
ವಾರದ ಹಿಂದೆ ಬ್ರೈನ್ ಹೆಮರೇಜ್ ನಿಂದಾಗಿ ಬಿದ್ದಿದ್ದರು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ.
ಮೃತರು ಪತ್ನಿ ಶಾಲಿನಿ, ಪುತ್ರರಾಫ ಶ್ರೇಯಸ್, ವಿಶ್ವಾಸ್, ಸಹೋದರ, ಸಹೋದರಿಯರು, ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ..