ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್, ಸುಳ್ಯ ಇದರ ಆಶ್ರಯದಲ್ಲಿರುವ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ ವಿ. ಯವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿಗಳಾದ ಡಾ| ರೇಣುಕಾಪ್ರಸಾದ್ ಕೆ.ವಿ.ಯವರು ನೇಮಕಗೊಳಿಸಿದ್ದಾರೆ. ಇವರು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದದಲ್ಲಿ ಕಳೆದ 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಲ್ಲದೆ ಇವರು ಕಳೆದ 13 ವರ್ಷಗಳಿಂದ ಕಾಲೇಜಿನ ಎನ್.ಎಸ್.ಎಸ್.ಮತ್ತು ಯೂತ್ ರೆಡ್ ಕ್ರಾಸ್ ಯೂನಿಟ್ನ ಸಂಯೋಜನಾಧಿಕಾರಿಯಾಗಿ ಹಾಗೂ ಅಡ್ಮಿಶನ್ ಓವರ್ಸೀ ಸೆಲ್ 2022 ಇದರ ಮುಖ್ಯ ಕೋ-ಆರ್ಡಿನೇಟರ್ ಆಗಿರುತ್ತಾರೆ. ಇವರು ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಶ್ರೀಮತಿ ರಾಜಮ್ಮ ಮತ್ತು ಟಿ. ವೆಂಕಟೇಗೌಡ ದಂಪತಿಗಳ ಪುತ್ರ. ಇವರು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಇವರು ತಮ್ಮ ಎಂ.ಟೆಕ್ ಪದವಿಯನ್ನು ಮೊದಲನೇ ರ್ಯಾಂಕ್ ಹಾಗೂ ಚಿನ್ನದ ಪದಕದೊಂದಿಗೆ ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಪಡೆದಿರುತ್ತಾರೆ. ಇವರು “Design and implementation of solution to some of the networking problems in heterogeneous wireless networks” ಸಂಶೋಧನೆಗೆ ವಿ.ಟಿ.ಯು. ಬೆಳಗಾವಿ ಇದರಿಂದ ಪಿ.ಹೆಚ್.ಡಿ. ಪದವಿಯನ್ನು ಪಡೆದಿರುತ್ತಾರೆ.