ಕಾಣಿಯೂರು ಪ್ರಗತಿ ಶಾಲಾ ವಿದ್ಯಾರ್ಥಿನಿ ಕು. ರಕ್ಷಾ ಎಂ.ರವರು ಕಳೆದ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ 621 ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಉದ್ಯೋಗಿ ಮುಪ್ಪೇರ್ಯ ಗ್ರಾಮದ ಮುಪ್ಪೇರ್ಯ ಮನೆ ಕೃಷ್ಣ ಎಂ. ಮತ್ತು ರೇಖಾ ಪಿ. ದಂಪತಿಯ ಪುತ್ರಿ.