ವಿವೇಕ ಜಾಗ್ರತ ಬಳಗ ಸುಳ್ಯ ಹಾಗೂ ಮಧ್ಯ ವಲಯ-3 ಬಳಗಳ ವತಿಯಿಂದ ಯೋಗ ಕಹಳೆ ವಿಶೇಷ ಸತ್ಸಂಗ ಕಾರ್ಯಕ್ರಮವು ಮೇ.22 ರಂದು ಸುಳ್ಯ ಓಡಬಾಯಿ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.
ಕೋಟ ಮೂಡುಗಿಳಿಯಾರು ಯೋಗಬನ ವೈದ್ಯಕೀಯ ನಿರ್ದೇಶಕರು ಮತ್ತು ಸರ್ವಕ್ಷೇಮ ಆಸ್ಪತ್ರೆ ಹಾಗೂ ಸಂಶೋಧನಾ ಪ್ರತಿಷ್ಠಾನ ಇದರ ಸಿಇಒ ಡಾ.ವಿವೇಕ ಉಡುಪರು ಚಿಂತನಕಾರರಾಗಿ ಭಾಗವಹಿಸಿ ಸುಳ್ಯ ವಿವೇಕ ಜಾಗ್ರತ ಬಳಗ ಹಲವಾರು ವರ್ಷಗಳಿಂದ ಹಲವು ಉತ್ತಮ ಕೆಲಸಗಳನ್ನು
ಮಾಡುತ್ತಾ ಬಂದಿದೆ.
ಇದರಲ್ಲಿ ಹಲವು ಮಂದಿ ಹಿರಿಯರಿದ್ದಾರೆ.
ಮನುಷ್ಯನು ಸತ್ಕರ್ಮಗಳನ್ನು ಹೆಚ್ಚಿಸಿ ಆದರ್ಶ ಜೀವನ ನಡೆಸಬೇಕು.ಉತ್ತಮ ಭವಿಷ್ಯ, ವ್ಯಕ್ತಿತ್ವವನ್ನು ರೂಪಿಸಿ ಭಗವಂತನ ಸೇವೆಗೆ ಮುಡಿಪಾಗಿರಬೇಕು.
ವಿಶೇಷವಾದ ಚಿಂತನೆಯಿಂದ ಸಂಸ್ಕಾರ ,ಸಂಸ್ಕೃತಿಗಳನ್ನು ಬೆಳೆಸಬೇಕು.
ದುಶ್ಚಟಗಳನ್ನು ಬಿಟ್ಟು ಆರೋಗ್ಯವಂತರಾಗಬೇಕು.ಪ್ರಕೃತಿಯನ್ನು ಪೂಜಿಸಬೇಕು,ನಾಶ ಮಾಡಬಾರದು ಎಂದು ಹೇಳಿದರು.
ವಿವೇಕ ಜಾಗ್ರತ ಬಳಗದ ಸುಂದರ ಗೌಡ ಏನೆಕಲ್ಲು ಸ್ವಾಗತಿಸಿ,ಯಶವಂತ ಡಿ.ಎಸ್.ಸುಳ್ಯ ಕಾರ್ಯಕ್ರಮ ನಿರೂಪಿಸಿದರು.
ಮಾಧವ ಮುಡೂರು ಸುಳ್ಯ, ಕೆ.ಪ್ರಕಾಶ್ ಕುಮಾರ್ ಶೆಟ್ಟಿ ಪನ್ನೆ ಬೆಳ್ಳಾರೆ ಇವರು ಸಹಕರಿಸಿದರು.
ಹಿರಿಯ ಕಾರ್ಯಕರ್ತರಾದ ಸುಮಿತ್ರ ಇಂಜಿಯರ್ ಹಾಗೂ ವಿವೇಕ ಜಾಗ್ರತ ಬಳಗದ 12 ಬಳಗದ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.