ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಅಪಾರ ಬೆಳವಣಿಗೆ ಹೊಂದಿ ಸುಂದರ ನಗರವಾಗಿ ಬೆಳೆದು ನಿಂತು ಭಾರತದ ನಕಾಶೆಯಲ್ಲಿ ಗುರುತಿಸಿಕೊಂಡಿದೆ ಆಧುನಿಕ ಸುಳ್ಯ. ಈ ಎಲ್ಲ ಬೆಳವಣಿಗೆಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣಕರ್ತರಾದ ಮೂಲಪುರುಷರೇ ಪೂಜ್ಯ ಡಾ. ಕುರುಂಜಿ ವೆಂಕಟ್ರಮಣ ಗೌಡರು. ಸುಳ್ಯ ನಗರದಲ್ಲಿ ಶಿಕ್ಷಣ ದೇಗುಲಗಳೆಡೆಗೆ ವಿಹಂಗಮ ದೃಷ್ಟಿ ಹಾಯಿಸಿದಾಗ ನೋಡುಗರ ಕಣ್ಣೆದುರು ಬರುವುದೇ ಡಾ. ಕುರುಂಜಿಯವರಿಂದ ಸುಳ್ಯದ ಕುರುಂಜಿಬಾಗ್ ಹಾಗೂ ಇತರೆಡೆಗಳಲ್ಲಿ ಸ್ಥಾಪಿಸಲ್ಪಟ್ಟ ಸಾಲುಸಾಲು ಶಿಕ್ಷಣಸಂಸ್ಥೆಗಳು. ಭಾರತದ ಪ್ರತಿಯೊಂದು ಮನೆಯಿಂದ ಕನಿಷ್ಠ ಓರ್ವ ಇಂಜಿನಿಯರ್ ಹೊರಬರುವ, ಗ್ರಾಮೀಣ ವಿದ್ಯಾರ್ಥಿಗಳಿಗೂ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸುವ, ಬಡ ವಿದ್ಯಾರ್ಥಿಗಳಿಗೂ ಇಂಜಿನಿಯರಿಂಗ್ ವಿದ್ಯಾಭ್ಯಾಸ ಕೈಗೆಟಕುವ ಮೂಲ ಧ್ಯೇಯೋದ್ದೇಶದೊಂದಿಗೆ ಸ್ಥಾಪಕಾಧ್ಯಕ್ಷರಾದ ಡಾ. ಕುರುಂಜಿಯವರಿಂದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು 1986ರಲ್ಲಿ ಸ್ಥಾಪನೆಗೊಂಡು 36 ಶೈಕ್ಷಣಿಕ ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲೊಂದಾಗಿ ಸದಾ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ.
ಕೈಗಾರಿಕೆಗೆ ಪೂರಕವಾದ ಶಿಕ್ಷಣಕ್ಕೆ ಮತ್ತು ತಾಂತ್ರಿಕ/ಮೂಲ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ನವದೆಹಲಿಯ ಎ.ಐ.ಸಿ.ಟಿ.ಇ.ಯಿಂದ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮತ್ತು ಕರ್ನಾಟಕ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದಿದೆ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನೇಕರು ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗಮನೀಯ ಸಾಧಕರಾಗಿ ಹೊರಹೊಮ್ಮಿರುವುದು ಈ ವಿದ್ಯಾಸಂಸ್ಥೆಗೆ ಹಿರಿಮೆಯ ಗರಿ ಮೂಡಿಸಿದೆ.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್, ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾಪ್ರಸಾದ್ ಕೆ.ವಿ. ಯವರ ದೂರದೃಷ್ಟಿಯ ಯೋಚನೆಯಂತೆ ತಮ್ಮ ತಂದೆಯವರ ಹೆಸರಿನಲ್ಲಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳ ಇಂಜಿನಿಯರಿಂಗ್ ಕಲಿಕೆಗೆ ಪ್ರತೀ ಶೈಕ್ಷಣಿಕ ವರ್ಷದಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿವೇತನ ನೀಡುವ ಸಲುವಾಗಿ ಆನ್ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಅರ್ಹ 2ನೇ ವರ್ಷದ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಣಿ ಮಾಡಿಕೊಂಡು, ಪರೀಕ್ಷೆ ಬರೆದು ವಿದ್ಯಾರ್ಥಿವೇತನದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್, ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ| ರೇಣುಕಾಪ್ರಸಾದ್ ಕೆ.ವಿ. ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿವೇತನ ನೀಡುವ ಸಲುವಾಗಿ ಇದೇ ಬರುವ ಜೂನ್ 10ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿರುವ ಈ ಪರೀಕ್ಷೆಗೆ ಜೂನ್ 8ರ ಮೊದಲು ನೋಂದಣಿ ಮಾಡಿಕೊಂಡು 2ನೇ ವರ್ಷದ ಪಿ.ಯು.ಸಿ. (ವಿಜ್ಞಾನ ವಿಭಾಗ) ವಿದ್ಯಾರ್ಥಿಗಳು ಆನ್ಲೈನ್ ಪರೀಕ್ಷೆ ಬರೆಯಬಹುದಾಗಿದೆ. ನೋಂದಣಿಗಾಗಿ ಅರ್ಹ ಪಿ.ಯು.ಸಿ. ವಿದ್ಯಾರ್ಥಿಗಳು https://tinyurl.com/2p8433cv ಎಂಬ ಕೊಂಡಿ (Link)ಯನ್ನು ಬಳಸಿಕೊಳ್ಳಬಹುದಾಗಿದೆ.
ಡಾ. ಕೆ.ವಿ.ಜಿ. ಆನ್ಲೈನ್ ವಿದ್ಯಾರ್ಥಿವೇತನದ ಪರೀಕ್ಷೆಯ ಪ್ರಮುಖ ವಿಶೇಷತೆಗಳೆಂದರೆ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯು ನಾಲ್ಕು ವರ್ಷಗಳ ಬಿ.ಇ. ವ್ಯಾಸಂಗಕ್ಕಾಗಿ ಅರ್ಹ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಒಟ್ಟು ರೂ. 41,16,000ವನ್ನು ಉದಾರವಾಗಿ ವ್ಯಯಿಸಿ, ವಿನಾಯಿತಿ ನೀಡುವ ಮೂಲಕ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಸಮಾಜಮುಖಿ ಕಾರ್ಯವಾಗಿ ಎಲ್ಲರ ಗಮನ ಸೆಳೆದಿದೆ. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಿಗೆ ಪಿ.ಯು.ಸಿ. ವಿಜ್ಞಾನ ವಿಭಾಗದ ಪಠ್ಯಕ್ರಮ(ಸಿಲೆಬಸ್)ವನ್ನೇ ಅನುಸರಿಸಿರುವುದರಿಂದ, ಮುಂದೆ ಸಿ.ಇ.ಟಿ. ಬರೆಯಲಿರುವ ವಿದ್ಯಾರ್ಥಿಗಳು ಇದನ್ನು ಒಂದು ಪರಿಣಾಮಕಾರಿ ಪೂರ್ವಭಾವೀ ಸಿದ್ಧತಾ ಪರೀಕ್ಷೆಯಾಗಿ ಪರಿಗಣಿಸಿ ಅದರ ಪ್ರಯೋಜನ ಪಡೆದುಕೊಳ್ಳಲು ಸದವಕಾಶ. ಒಂದು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅಥವಾ ಸ್ಪರ್ಶಾಧರಿತ ಪರದೆ (ಟಚ್ ಸ್ಕ್ರೀನ್) ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ವ್ಯವಸ್ಥೆಯೊಂದಿಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಮನೆಯಿಂದಲೇ ಜೂನ್ 10ರಂದು ಪರೀಕ್ಷೆ ಬರೆಯಬಹುದಾಗಿದೆ. ನೋಂದಣಿ ಹಾಗೂ ಪರೀಕ್ಷಾ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳು ಇದಕ್ಕಾಗಿ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಈ ಪರೀಕ್ಷೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂಬಂಧಿತ ಅಧ್ಯಯನ ಸಾಮಗ್ರಿ (ಸ್ಟಡಿ ಮೆಟಿರಿಯಲ್) ಗಳ ಲಘು ಪ್ರತಿ ಗಳು ಲಭ್ಯವಿರುತ್ತವೆ. ಕೆ.ವಿ.ಜಿ. ವಿದ್ಯಾರ್ಥಿವೇತನದ ಪರೀಕ್ಷೆಯಲ್ಲಿ ಸೂಕ್ತ, ಅರ್ಹತೆ ಪಡೆದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಚಿತ ಇಂಜಿನಿಯರಿಂಗ್ ಶಿಕ್ಷಣದ ವ್ಯಾಸಂಗಕ್ಕೆ ಇದೊಂದು ಸುವರ್ಣಾವಕಾಶ.
ಇಂಜಿನಿಯರಿಂಗ್ ಪದವಿ ಪಡೆದ ಮಂದಿಗೆ ತಾಂತ್ರಿಕ ಕ್ಷೇತ್ರ ಹಾಗೂ ತಾಂತ್ರಿಕೇತರ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನೂ ಕೈಗೊಳ್ಳಬಹುದು. ಕೈಗಾರಿಕಾ ಕ್ಷೇತ್ರಗಳಲ್ಲದೆ ಬ್ಯಾಂಕಿಂಗ್, ಮಿಲಿಟರಿ ಇತ್ಯಾದಿ ತಾಂತ್ರಿಕೇತರ ಕ್ಷೇತ್ರಗಳಲ್ಲಿನ ಸೇವೆಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಪರೀಕ್ಷೆಗಳಾದ IAS, IPS, IES, KES ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSC, KPSC ಗಳಲ್ಲಿ BE ಪದವೀಧರರು ಉತ್ತಮ ಸಾಧನೆ ಮಾಡಬಹುದಾಗಿದೆ. ಎಂದು ಈಗಾಗಲೇ ಅವರು ಸಾಧಿಸಿ ತೋರಿಸಿಕೊಟ್ಟಿದ್ದು ಎಲ್ಲೆಡೆ ಜನಜನಿತವಾಗಿದೆ.
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ (ತರಬೇತಿ ಮತ್ತು ಉದ್ಯೋಗ ನೀಡಿಕೆ) ವಿಭಾಗವು ಅನುಭವೀ ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರುವ, ಪ್ರಸಿದ್ದ ಕಂಪೆನಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ತಂಡವನ್ನು ಹೊಂದಿದ್ದು; 2020-21ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನ ಕ್ಯಾಂಪಸ್ಗೆ ಸರಿಸುಮಾರು 125 ಕಂಪೆನಿಗಳು ಭೇಟಿ ನೀಡಿದ್ದು 132ಮಂದಿ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದು, 2021-22ರ ಮೇ ತಿಂಗಳ ವರೆಗೆ ಈಗಾಗಲೇ 105 ಕಂಪೆನಿಗಳು ಭೇಟಿ ನೀಡಿದ್ದು 204 ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆಗೊಂಡಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಅನೇಕ ಕಂಪೆನಿಗಳು ಭೇಟಿ ನೀಡಲಿದ್ದು, ಆ ಕಂಪೆನಿಗಳ ಭರವಸೆಯಂತೆ 150ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳ ಆಯ್ಕೆಯನ್ನು ನಿರೀಕ್ಷಿಸಲಾಗಿದೆ. ಅರ್ಹ ವಿದ್ಯಾರ್ಥಿಗಳನ್ನು ತಮ್ಮ ಕಂಪೆನಿಗಳಿಗೆ ಉದ್ಯೋಗಿಗಳಾಗಿ ಆಯ್ಕೆ ಮಾಡಲು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ಗೆ IBM, Saken, Infosys, Toyota, Wipro, Tessolve, Biju’s, TCS(TATA), L&T, Robosoft, SLK Software, Tech Mahindra, Wipfli ಮತ್ತು ಇನ್ನೂ ಹಲವಾರು ಪ್ರತಿಷ್ಠಿತ ಕಂಪೆನಿಗಳು ಭೇಟಿ ನೀಡಿ ಸಂದರ್ಶನಗಳನ್ನು ಆಯೋಜಿಸುತ್ತವೆ. ಸ್ಕಾಲರ್ಶಿಪ್ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 9019761755 ಮತ್ತು 9480161966