Breaking News

ಶಾಂತಿನಗರ ಕ್ರೀಡಾಂಗಣ ಅಭಿವೃದ್ಧಿ ಕುರಿತು ಸಚಿವ ಅಂಗಾರ ಪತ್ರಿಕಾಗೋಷ್ಠಿ : ಮೂರ್‍ನಾಲ್ಕು ದಿನಗಳಲ್ಲಿ ಪ್ಲಾಸ್ಟಿಕ್ ಹೊದಿಕೆ, ನೀರು ನಿಲ್ಲದಂತೆ ಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ನಗರದ ಶಾಂತಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಕ್ರೀಡಾಂಗಣದ ಕಾಮಗಾರಿಯ ಕುರಿತು ಸಚಿವ ಎಸ್.ಅಂಗಾರ ಅವರು ಮೇ. 22ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈಗಾಗಲೇ ನಾವು ತೀರ್ಮಾನಿಸದಂತೆ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಕ್ರೀಡಾಂಗಣಕ್ಕೆ ಪ್ಲಾಸ್ಟಿಕ್ ಟರ್ಪಲ್ ಹೊದಿಸಿ, ಮಣ್ಣು ಕುಸಿಯದಂತೆ ಕ್ರಮ ಕೈಗೊಳ್ಳುತ್ತೇವೆ, ಹಾಗೂ ಆ ಭಾಗದಲ್ಲಿ ನೀರು ಶೇಖರಣೆಗೊಳ್ಳದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.
ಕ್ರೀಡಾಂಗಣಕ್ಕೆ ತಡೆಗೋಡೆ ನಿರ್ಮಿಸುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕ್ರೀಡಾಂಗಣಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಸುಮಾರು ಒಂದೂವರೆ ಕೋಟಿಯಷ್ಟು ಅನುದಾನ ಬೇಕಾಗುತ್ತದೆ. ಆ ಅನುದಾನ ತರುವಾಗ ಕ್ರೀಡಾಂಗಣದಲ್ಲಿ ಮುಂದೆ ಕ್ರೀಡಾಪಟುಗಳಿಗೆ ಬೇಕಾದ ಅವಶ್ಯ ಮೂಲಭೂತ ಅವಶ್ಯಕತೆಗಳ ಕಡೆಗೂ ಗಮನಕೊಡಬೇಕಾಗುತ್ತದೆ. ಇದಕ್ಕಾಗಿ ಸಂಬಂಧಿಸಿದ ಕ್ರೀಡಾ ಸಚಿವರ ಜೊತೆಗೂ ಮಾತನಾಡಿದ್ದೇನೆ ಎಂದು ಸಚಿವರು ಹೇಳಿದರು.
ತಾಲೂಕಿನ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕಳೆದ ಆರು ಅವಧಿಯಲ್ಲಿಯೂ ಕೂಡ ಕೆಲಸ ನಿರ್ವಹಿಸಿದ್ದೇನೆ. ೧೯೯೬ರಲ್ಲಿ ಪಟ್ಟಣ ಪಂಚಾಯತಿ ಇದ್ದ ಸಂದರ್ಭದಲ್ಲಿ ಶಾಂತಿನಗರದ ಆ ಜಾಗವನ್ನು ಕ್ರೀಡಾಂಗಣಕ್ಕಾಗಿ ಮೀಸಲಿರಿಸಿ, ೨೦೦೬-೦೭ರಲ್ಲಿ ಅಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಸರಕಾರದಿಂದ ಬರುವ ಅನುದಾನದಿಂದ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇನೆ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಮತ್ತು ಕ್ರೀಡಾ ಇಲಾಖೆಯಿಂದ ಸೂಕ್ತ ಸಲಹೆ ಸೂಚನೆ ಪಡೆದುಕೊಂಡು ಕ್ರೀಡಾಂಗಣ ನಿರ್ಮಾಣದ ಕೆಲಸ ನಡೆಸುತ್ತಾ ಬಂದಿದ್ದೇನೆ.
ಪ್ರಾರಂಭದಲ್ಲಿ ೨೦೦ ಮೀಟರ್ ನ ಟ್ರ್ಯಾಕ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಜನರ ಬೇಡಿಕೆಯಿಂದ ಮತ್ತು ಕ್ರೀಡಾಪಟುಗಳು ಭವಿಷ್ಯದ ಹಿತದೃಷ್ಟಿಯಿಂದ ಅದನ್ನು ಮತ್ತಷ್ಟು ಏರಿಸಿ, ೪೦೦ ಮೀಟರ್ ಟ್ರ್ಯಾಕ್ ನ ವಿಶಾಲ ಕ್ರೀಡಾಂಗಣ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ.
ಪ್ರಾರಂಭದಲ್ಲಿ ಎರಡು ಮೂರು ಸಮಸ್ಯೆಗಳು ನಮಗೆ ಎದುರಾಗಿದೆ. ಅದನ್ನು ನಾನು ಇಲ್ಲ ಎಂದು ಹೇಳುವುದಿಲ್ಲ. ಅದು ಯಾವುದೆಂದರೆ ಕ್ರೀಡಾಂಗಣದಲ್ಲಿ ತುಂಬುವ ನೀರು ಕೆಳಭಾಗಕ್ಕೆ ಹರಿದು ಅಲ್ಲಿ ವಾಸಿಸುವ ಸ್ಥಳೀಯರ ತೋಟಗಳಿಗೆ ಅಲ್ಪಮಟ್ಟದ ಸಮಸ್ಯೆ ಉಂಟಾಗಿದೆ. ಇದರೊಂದಿಗೆ ಮಣ್ಣು ಹೆಚ್ಚಾಗಿರುವ ಕಾರಣ ಸ್ಥಳೀಯರಿಗೆ ಅದು ಕುಸಿಯಬಹುದೆಂಬ, ಆತಂಕವೂ ಬಂದಿರಬಹುದು. ಆದರೆ ಆ ರೀತಿಯ ಘಟನೆ ನಡೆಯಲು ನಾವು ಆಸ್ಪದ ಮಾಡಿಕೊಡುವುದಿಲ್ಲ. ಕ್ರೀಡಾಂಗಣದ ಮಧ್ಯಭಾಗದಲ್ಲಿ ಬಿರುಕು ಬಿಟ್ಟಿರುವ ಕುರಿತು ಪತ್ರಕರ್ತರು ಕೇಳಿದಾಗ ಅಲ್ಲಿಗೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಲು ತಿಳಿಸುವುದಾಗಿ ಹೇಳಿದರು.
ನಗರದ ನೀರು ಶುದ್ಧೀಕರಣ ಘಟಕದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ಎಲ್ಲಾ ಕಡೆಗಳಲ್ಲಿ ಬೋರ್‌ವೆಲ್ ಕೊರೆತದಿಂದಾಗಿ ಒಂದರಿಂದ ಎರಡು ವರ್ಷದಲ್ಲಿ ಆ ಬೋರ್‌ವೆಲ್‌ಗಳಲ್ಲಿ ನೀರು ಡ್ರೈ ಆಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ೧೭ ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಕೂಡಾ ಆಗಿದೆ. ಸಧ್ಯ ಮಳೆಗಾವಾದ್ದರಿಂದ ಕಾಮಗಾರಿ ವಿಳಂಬವಾಗಿದೆ. ಈಗ ಇರುವ ಶುದ್ಧೀಕರಣ ಘಟನವನ್ನೇ ಸದ್ಭಳಕೆ ಮಾಡಿಕೊಂಡು ಹೆಚ್ಚುವರಿ ಕೆಲಸ ಏನು ಆಗಬೇಕು ಅದನ್ನು ಮಾಡಲಾಗುವುದು ಎಂದು ಸಚಿವರು ಹೇಳಿದರು.
೧೧೦ ಕೆವಿಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈಗಾಗಲೇ ಇದಕ್ಕೆ ಸಂಬಂದಿಸಿದಂತೆ ೨ ಸಭೆಗಳು ನಡೆದಿದೆ. ಕ್ಯಾಶ್ಯೂ ಡೆವಲಪ್‌ಮೆಂಟ್ ಕಾರ್ಪೋರೇಶನ್ ವತಿಯಿಂದ ಎನ್‌ಒಸಿ ಸಿಕ್ಕಿದ್ದು ಸರಕಾರದ ಮಟ್ಟದಲ್ಲಿದೆ. ಮುಂದೆ ದೆಹಲಿಗೆ ಹೋಗಿ ಅದು ಜಾರಿಯಾಗಿ ಬರುತ್ತದೆ. ಈಗ ಅರಣ್ಯ ಸಮಸ್ಯೆಗಳು ನಿವಾರಣೆಯಾಗಿದೆ. ಇಂಧನ ಸಚಿವರು ಮತ್ತು ನಾನು ಸೇರಿಕೊಂಡು ೧೧೦ ಕೆವಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಚರ್ಚಿಸಿದ್ದೇನೆ. ಈಗ ಸಮಸ್ಯೆಗಳೆಲ್ಲಾ ನಿವಾರಣೆಯಾಗಿದೆ ಎಂದು ಸಚಿವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರ.ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.
೪೫ ವರ್ಷದಲ್ಲಿ ಕಾಂಗ್ರೆಸ್ ಮಾಡಿದ ಕಾಮಗಾರಿಗಳು ದುಡ್ಡಿಗಾಗಿಯೇ? : ಸಚಿವರ ಪ್ರಶ್ನೆ
ತಾಲೂಕಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡಿಕೊಂಡು ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಚಿವ ಎಸ್. ಅಂಗಾರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಾಂತಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಕ್ರೀಡಾಂಗಣದ ಬಗ್ಗೆ ಕಾಂಗ್ರೆಸ್ ನವರು ಆಧಾರರಹಿತವಾದ ಆರೋಪ ಮಾಡುತ್ತಿದ್ದು, ತಾನು ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡುತ್ತಿಲ್ಲ. ಕಾಂಗ್ರೆಸ್ಸಿಗರ ರಾಜಕೀಯ ಇವತ್ತು ನಿನ್ನೆಯದಲ್ಲ. ಅವರ ರಾಜಕೀಯ ಇತಿಹಾಸದಲ್ಲಿ ಅವರು ರಾಜಕೀಯವನ್ನೇ ಮಾಡಿದ್ದಾರೆ ಹೊರತು ಅಭಿವೃದ್ಧಿ ಕಡೆ ಗಮನ ನೀಡಿಲ್ಲ. ನನ್ನ ಮೇಲೆ ಆರೋಪಿಸಿ, ಅಭಿವೃದ್ಧಿಯ ವಿಷಯದಲ್ಲಿ ಹೊಟ್ಟೆಕಿಚ್ಚುಪಟ್ಟು ಕಾಂಗ್ರೆಸ್ ನವರು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಚಿವ ಎಸ್. ಅಂಗಾರರು ಹೇಳಿದರು.
ಕಳೆದ ೪೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದ ಸಂದರ್ಭದಲ್ಲಿ ದೇಶ ಮತ್ತು ರಾಜ್ಯದಲ್ಲಿ ಅವರು ಮಾಡಿರುವ ಕಾಮಗಾರಿಗಳೆಲ್ಲಾ ದುಡ್ಡಿಗಾಗಿಯೇ ಎಂದು ಇದೇ ವೇಳೆ ಸಚಿವರು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರು ನನ್ನ ಮೇಲೆ ಮಾಡಿರುವ ಆರೋಪವನ್ನು ಮೊದಲು ಸಾಭೀತು ಮಾಡಲಿ. ನಮಗೆ ದುಡ್ಡು ಮಾಡುವುದೇ ಆದರೆ ದುಡ್ಡೇ ಮಾಡಬಹುದಿತ್ತು. ಅದು ಅಂಗಾರನ ಜಾಯಮಾನವಲ್ಲ. ಅಂಗಾರ ತನ್ನ ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕು ಹಾಗೂ ಹೇಗೆ ಅಭಿವೃದ್ಧಿ ಮಾಡಬೇಕೆಂಬ ಸ್ಪಷ್ಟತೆ ಇದೆ. ಆದರೆ ಅವರಿಗೆ ಸ್ಪಷ್ಟತೆ ಇಲ್ಲ. ಪಿ.ಸಿ. ಜಯರಾಮರು ಈ ಹಿಂದೆ ತಾ.ಪಂ. ಚುನಾವಣೆಯ ಸಂದರ್ಭದಲ್ಲಿ ಸೇವಾಜೆ – ಮಡಪ್ಪಾಡಿ ರಸ್ತೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಊರಿನ ಜನರಿಗೆ ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಆದರೆ ಅದು ಅವರಿಗೆ ಸಾಧ್ಯವಾಗಿಲ್ಲ. ಆದರೆ ಈಗ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಯ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿಯ ವೇಗ ನೋಡಿ ಸಹಿಸಲು ಸಾಧ್ಯವಾಗದೇ, ಕಾಂಗ್ರೆಸ್ಸಿಗರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.