ಬಿರುಕು ಬಿಟ್ಟ ಗೋಡೆಗೆ ಮರದ ಆಧಾರ
ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು ಗೋಡೆ ಬಿರುಕು ಬಿಟ್ಟಿದೆ. ಗೋಡೆ ಬೀಳದಂತೆ ಇದೀಗ ಊರವರು ಸೇರಿ ಮರದ ಕೊಂಬೆಯನ್ನು ಆಧಾರವಾಗಿ ಇಡಲಾಗಿದೆ.
ಶಾಲೆ ಶಿಥಿಲಾವಸ್ಥೆಯಲ್ಲಿ ರುವುದರಿಂದ ಶಾಲೆಗೆ ಅಭಿವೃದ್ಧಿಗೆ ಊರವರು ಪಂಚಾಯತ್ ಮೂಲಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಶಾಲೆಯ ಗೋಡೆ ಬಿರುಕು ಬಿಟ್ಟಿರುವುದರಿಂದ ಗೋಡೆ ಬೀಳದಂತೆ ವಿಪತ್ತು ನಿರ್ವಹಣಾ ಘಟಕದವರು ಶ್ರಮದಾನ ನಡೆಸಿ ಶಾಲೆಯ ಗೋಡೆಗೆ ಮರದ ಕೊಂಬೆಯನ್ನು ಆಧಾರವಾಗಿ ಇಟ್ಟಿದ್ದಾರೆ.