ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಫೆಡರೇಷನ್ (ಸಿ ಐ ಟಿ ಯು) ಸುಳ್ಯ ತಾಲೂಕು ಇದರ ವಾರ್ಷಿಕ ಸಮಾವೇಶ, ಜಾಥಾ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇಂದು ಸುಳ್ಯ ಕನ್ನಡ ಭವನ ಸಭಾಭವನದಲ್ಲಿ ನಡೆಯಿತು.
ವಾರ್ಷಿಕ ಸಮಾವೇಶ ಕಾರ್ಯಕ್ರಮಕ್ಕೂ ಮುನ್ನ ಸುಳ್ಯ ತಾಲೂಕಿನ ವಿವಿಧ ಕಾರ್ಮಿಕರ ವತಿಯಿಂದ ಜ್ಯೋತಿ ವೃತ್ತದಿಂದ ಸುಳ್ಯ ಬಸ್ಸು ನಿಲ್ದಾಣ ಮೂಲಕ ಕನ್ನಡ ಭವನದವರೆಗೆ ಜಾಥಾ ನಡೆಯಿತು.
ನಂತರ ನಡೆದ ವಾರ್ಷಿಕ ಸಮಾವೇಶದ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಕಟ್ಟಡ ಕಾರ್ಮಿಕ ಸಂಘದ ಕೋಶಾಧಿಕಾರಿ ಸುರೇಶ್ ಕಲ್ಲಾಗಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ್ ಎಚ್ ಕೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ವಸಂತಾಚಾರಿ ಸಂಘಟನೆಯ ದೆಯೋದ್ದೇಶದ ಕುರಿತು ಮಾಹಿತಿ ನೀಡಿದರು. ಸುಳ್ಯ ತಾಲೂಕು ಸಿಐಟಿಯು ಅಧ್ಯಕ್ಷ ಜಾನಿ ಕೆಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿಜು ಅಗಸ್ಟೀನ್, ಕೋಶಾಧಿಕಾರಿ ವಿಶ್ವನಾಥ ನೆಲ್ಲಿ ಬಂಗಾರಡ್ಕ, ಮುಖಂಡರುಗಳಾದ ಪ್ರಸಾದ ಕಲ್ಲುಗುಂಡಿ,ಕೃಷ್ಣ ಮೇಸ್ತ್ರಿ ಕಣ್ಣೂರು,ನಾರಾಯಣ ಮೇಸ್ತ್ರಿ, ಶ್ರೀಧರ ಕಡೆಪ್ಪಾಲ, ನಾಗರಾಜ್ ಕಲ್ಲುಮುಟ್ಲು, ಶಿವರಾಮಗೌಡ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದು ವಿವಿಧ ಪ್ರಶಸ್ತಿಗಳನ್ನು ಭಾಜನರಾದ ಸಂಘದ ಉಪಾಧ್ಯಕ್ಷ ಮಂಜುನಾಥ್ ಬಳ್ಳಾರಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಸದಸ್ಯ ಉಸ್ಮಾನ್ ಜಯನಗರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.