ಕನಕಮಜಲು ಗ್ರಾಮದ ಬುಡ್ಲೆಗುತ್ತು ಕೋಟೆಬರಿ ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ನವೀಕರಣ ಕಾರ್ಯದ ಬಗ್ಗೆ ಆರು ದಿನಗಳ ಸ್ವರ್ಣ ಚಿಂತನೆ ಕಾರ್ಯಕ್ರಮವು ಜ್ಯೋತಿಷ್ಯ, ದೈವಜ್ಞ ಬಾಲಕೃಷ್ಣ ಕಲ್ಲಾರ್ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬುಡ್ಲೆಗುತ್ತು ಕುಟುಂಬದ ಯಜಮಾನ ಜಯರಾಮ ಬುಡ್ಲೆಗುತ್ತು ಮತ್ತು ಕುಟುಂಬದವರು ಹಾಗೂ ಅಡೂರು ಪದಿಕಾಲಡ್ಕ ತಂಬುರಾಟಿ ಸ್ಥಾನಿಕರು, ಜಾಲ್ಸೂರು ಹಾಗೂ ಕನಕಮಜಲಿನ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಇದರ ಸಂಪೂರ್ಣ ಜವಾಬ್ದಾರಿಯನ್ನು ಸ್ಥಳ ಮೊಕ್ತೇಸರ ದಯಾನಂದ ಅವರು ನೆರವೇರಿಸಿದರು.