Breaking News

ಮೇ. 26-27: ಬೆಳ್ಳಾರೆ ಗೌರಿಪುರಂನಲ್ಲಿ ನಾಗಪ್ರತಿಷ್ಠೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಬೆಳ್ಳಾರೆಯ ಗೌರಿಹೊಳೆಯ ಪಕ್ಕದ ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಚಿತ್ರಕೂಟ ಸಹಿತ ನಾಗ ದೇವರ ಪ್ರತಿಷ್ಠಾ ಕಾರ್ಯಕ್ರಮ ಮೇ. 26-27ರಂದು ನಡೆಯಲಿದೆ.
ಶ್ರೀ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಒಂದೊಂದಾಗಿ ನಡೆಯುತ್ತಾ ಬರುತಿದ್ದು, ಆರಂಭಿಕ ಹಂತದಲ್ಲಿ ನಾಗ ದೇವರ ಪ್ರತಿಷ್ಠೆ ನಡೆಯಲಿದೆ.
ದೈವಜ್ಞರಾದ ತಂಬನ್ ಪಣಿಕ್ಕರ್ ಮತ್ತು ಮಧುಸೂದನ ಪಣಿಕ್ಕರ್ ರವರು ಮತ್ತು ಮಲಯಾಳಂ ನಿಂದ ಕನ್ನಡ ಮತ್ತು ತುಳುವಿಗೆ ಭಾಷಾಂತರಿಸಿ ಸವಿವರವಾಗಿ ಮನವರಿಕೆ ಮಾಡಿಕೊಟ್ಟು ಮಾತ್ರವಲ್ಲದೆ ನಿರಂತರ ಕ್ಷೇತ್ರದ ಸಮಿತಿಯವರ ಸಂಪರ್ಕದಲ್ಲಿ ಇದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿರುವ ಶ್ರೀ ಗೋಪಾಲಕೃಷ್ಣ ವಾಂತಿಜಾಲುರವರು 2021ರ ಸೆ. 09ರಿಂದ 15 ದಿನಗಳ ಕಾಲ ನಡೆಸಿದ ಪ್ರಶ್ನಾಚಿಂತನೆಯಲ್ಲಿ ಈ ಕ್ಷೇತ್ರದಲ್ಲಿ ಯುಗ ಯುಗಾಂತರಗಳ ಹಿಂದೆ ರಾಜರಾಜೇಶ್ವರಿ ದೇವಿಯ ದೇವಸ್ಥಾನ ಇತ್ತು ಎನ್ನುವುದು ಕಂಡುಬಂದಿರುವುದಾಗಿದೆ. ಗೌರಿ ಹೊಳೆಯ ಪರಿಸರ ಇದಾಗಿದ್ದು ಗೌರಿಪುರಂ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎನ್ನುವುದು ಐತಿಹ್ಯ. ಈ ಕ್ಷೇತ್ರದಲ್ಲಿ ಋಷಿಗಳು ತಪಸ್ಸನ್ನಾಚರಿಸಿದಾಗ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿ ತಾಂಡವ ನೃತ್ಯವಾಡುತ್ತ ತಮ್ಮ ಡಮರುಗದಲ್ಲಿ ಎಂಟು ಬಾರಿ ಬಾರಿಸಿ ಜ್ಞಾನವನ್ನು ನೀಡಿ ಕೊನೆಯಲ್ಲಿ ಕುರುಹಿಗಾಗಿ ಪಾದಗಳನ್ನೂರಿದ ಪುಣ್ಯಭೂಮಿ ಇದಾಗಿದ್ದು. ನಂತರದಲ್ಲಿ ಕ್ಷೇತ್ರ ನಿರ್ಮಾಣವಾಗಿ ಪರಮ ಕಾರಣೀಕದಿಂದೊಡಗೂಡಿ ವಿವಾಹ, ಸಂತಾನ ಭಾಗ್ಯಕ್ಕೆ ಸಂಬಂಧಿಸಿದ ಪ್ರಾರ್ಥನೆಗೆ ಶೀಘ್ರ ಫಲ ದೊರೆಯುತ್ತಿತ್ತು ಎನ್ನಲಾಗಿದೆ. ಶ್ರೀ ಕ್ಷೇತ್ರದ ಸಮೀಪವೇ ಅಷ್ಟಕುಲ ಶ್ರೀ ನಾಗಬ್ರಹ್ಮ, ನಾಗರಾಜ, ವೀಣಾಪಾಣಿ ನಾಗಕನ್ನಿಕೆ ಇರುವ ಚಿತ್ರಕೂಟ ಸಹಿತ ನಾಗಬನವಿದ್ದು, ಆ ಭಾಗದ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಬಂಧಿಸಿದ್ದಾಗಿದೆ ಎಂಬುದು ತಿಳಿದು ಬಂದಿರುವುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಈ ಕ್ಷೇತ್ರ ವಿಶೇಷವಾಗಿದ್ದು ಶ್ರೀ ರಾಜರಾಜೇಶ್ವರಿ ಅಮ್ಮನವರು ಸರ್ವಾಲಂಕಾರಭೂಷಿತೆಯಾಗಿ ಮಹಾಗಣಪತಿ, ಆಂಜನೇಯ, ವಿಷ್ಣು ಮತ್ತು ಸುಬ್ರಹ್ಮಣ್ಯ ದೇವರ ಸಾನಿಧ್ಯವಿರುವುದಾಗಿದೆ. ಇದರೊಂದಿಗೆ ಮಹಿಷಂದಾಯ ಕೊಡಮಣಿತ್ತಾಯ, ಗುಳಿಗ ದೈವಗಳನ್ನೊಳಗೊಂಡ ಗುರುಸ್ಥಾನ, ದೀಪಸ್ತಂಭ, ಧ್ವಜಸ್ಥಂಭ ಇರುವುದಾಗಿ ತಿಳಿದುಬಂದಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಾಲಿಂಗೇಶ್ವರ ಭಟ್ಟರ ಜಾಗದಲ್ಲಿ ಚಿತ್ರಕೂಟ ಸಹಿತ ನಾಗಬನದ ಪ್ರತಿಷ್ಠೆ ಮೇ. 26ಮತ್ತು 27ರಂದು ಕುನ್ನತ್ತಿಲ್ ಶ್ರೀ ಮುರಳೀಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷರಾಗಿ ಚಂದ್ರಹಾಸ ಮಣಿಯಾಣಿ ಪಡ್ಪು, ಪ್ರದಾನ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಪಿ.ಎಸ್. ಬಂಡಿಮಜಲು, ಖಜಾಂಜಿಯಾಗಿ ಆನಂದ ಗೌಡ ಪಡ್ಪು ಮುಂದಾಳತ್ವ ವಹಿಸಿದರೆ ಟ್ರಸ್ಟಿನ ನಿರ್ದೇಶಕರು, ಹಿರಿಯ ಸಲಹಾ ಸಮಿತಿ ಸದಸ್ಯರು ಸರ್ವ ಸದಸ್ಯರು, ಊರವರು ಇವರ ಹಿಂದೆ ಸಹಕಾರ ನೀಡುತ್ತಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.