ವನದುರ್ಗಿ ಅಗರ್ವುಡ್ ಅಗರ್ ಬೆಳೆಯ ವಿಚಾರ ಸಂಕಿರಣ ಕಾರ್ಯಕ್ರಮವು ಕರಿಕ್ಕಳದ ಸಾಯಿ ಕೃಪಾ ನಿಲಯ ಪುರಿಯ ಮನೆ ರಾಮಕೃಷ್ಣ ಗೌಡರ ಮನೆಯಲ್ಲಿ ಮೇ.22 ರಂದು ನೆರವೇರಿತು.
ಅಗರ್ ವುಡ್ ಸಂಸ್ಥೆಯ ಜಿ.ಚಂದ್ರುರವರು ಮಾತನಾಡಿ, ಅಗರ್ ವುಡ್ ಬೆಳೆಯ ಪಾಲನೆ ಪೋಷಣೆಯ ಬಗ್ಗೆ ಹಾಗೂ ಅದು ಎಷ್ಟು ವರ್ಷ ಬೆಳೆದ ನಂತರ ಅದಕ್ಕೆ ಇನ್ಸುಲೇಶನ್ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ವನದುರ್ಗಿ ಸಂಸ್ಥೆಯ ಮುಖ್ಯಸ್ಥರಾದ ಧರ್ಮೇಂದ್ರ ಕುಮಾರ್ ಹೆಗಡೆರವರು ಅಗರು ಮರವನ್ನು ನಿಧಾನವಾಗಿ ಖರೀದಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಮಕೃಷ್ಣ ಗೌಡ ಪುರಿಯ ಮಾತನಾಡಿ, “ರೈತನಾದನು ತನ್ನ ಭೂಮಿಯಲ್ಲಿ ಹತ್ತು ಹಲವು ಕೃಷಿಯನ್ನು ಮಾಡಬೇಕು. ಒಂದು ವರ್ಷಕ್ಕೆ 12 ತಿಂಗಳು ಇದ್ದ ಹಾಗೆ ರೈತ ತನ್ನ ಭೂಮಿಯಲ್ಲಿ 12 ಬಗೆಯ ಕೃಷಿಯನ್ನು ಮಾಡಬೇಕು. ಒಂದರಲ್ಲಿ ಸೋಲು ಕಂಡರೂ ಇನ್ನೊಂದು ಕೃಷಿಯಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದರು.
ಡಾ.ಬಿ.ಸಿ ನಂಜಪ್ಪ,
ಡಾ. ವೆಂಕಟೇಶ್, ಚಂದ್ರಾ ಕೋಲ್ಚಾರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಚಿನ್ ಕಾರ್ಯಕ್ರಮ ನಿರೂಪಿಸಿದರು.