ತೊಡಿಕಾನ ಗ್ರಾಮದ ಚಿಟ್ನೂರು ಬಾಲಕೃಷ್ಣ ಅಮೆ ಎಂಬವರು ಮನೆಯ ಬಾತ್ ರೂಮಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ. 23 ರಂದು ನಡೆದಿದೆ.
ಇಂದು ಮುಂಜಾನೆ ಬಾತ್ ರೂಮಿಗೆ ಹೋದ ಬಾಲಕೃಷ್ಣರು ಸುಮಾರು ಹೊತ್ತಾದರೂ ಬಾರದೆ ಹೋದಾಗ , ಅವರನ್ನು ಕರೆಯಲು ಹೋದ ಮನೆಯವರಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯಿತು.
ಮೃತರು ಪತ್ನಿ , ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ