ಸಾರ್ವಜನಿಕ ವಿತರಣಾ ಪದ್ಧತಿಯಡಿ ಅಂತ್ಯೋದಯ ಮತ್ತು ಬಿ.ಪಿ.ಎಲ್. ಪಡಿತರ ಚೀಟಿದಾರರಿಗೆ ಪಡಿತರ ಪದಾರ್ಥಗಳ ಸಮರ್ಪಕ ವಿತರಣೆಯ ಉಸ್ತುವಾರಿ ವಹಿಸಲು ರಾಜ್ಯ ಸರಕಾರವು ಜಿಲ್ಲಾ ಮಟ್ಟದಲ್ಲಿ ಜಾಗೃತ ಸಮಿತಿಗಳನ್ನು ರಚಿಸಿದೆ. ಈ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿರುತ್ತಾರೆ.
ದ.ಕ. ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯ ಸದಸ್ಯರಾಗಿ ಸುಳ್ಯ ತಾಲೂಕಿನಿಂದ ರಾಧಾಕೃಷ್ಣ ಬೊಳ್ಳೂರುರವರನ್ನು ಸರಕಾರ ನೇಮಿಸಿದೆ. ರಾಧಾಕೃಷ್ಣ ಬೊಳ್ಳೂರುರವರು ಬಿಜೆಪಿಯ ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾಗಿದ್ದು, ಸುಳ್ಯ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಅಮರಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದಾರೆ,
*ತಾಲೂಕು ಜಾಗೃತಿ ಸಮಿತಿ* : ಸುಳ್ಯ ತಾಲೂಕು ಮಟ್ಟದಲ್ಲಿ ಜಾಗೃತಿ ಸಮಿತಿ ರಚನೆಯಾಗಿದ್ದು ಅದರ ಅಧ್ಯಕ್ಷರಾಗಿ ಕ್ಷೇತ್ರದ ಶಾಸಕರಿರುತ್ತಾರೆ. ತಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರಾಗಿರುತ್ತಾರೆ. ತಾಲೂಕು ಪಂಚಾಯತ್ನ ಮಹಿಳಾ ಸದಸ್ಯರು ಸದಸ್ಯರಾಗಿದ್ದು, ಶ್ರೀಮತಿ ಭವಾನಿ ಕದಿಕಡ್ಕ ಜಾಲ್ಸೂರು, ಶ್ರೀಮತಿ ಲಲಿತಾ ನಾಯ್ಕ್ ಮಣಿಮಜಲು ಕಳಂಜ, ಶ್ರೀಮತಿ ವಾರಿಜಾ ಚೈಪೆಮನೆ ಗುತ್ತಿಗಾರು, ಶ್ರೀಮತಿ ಸೌಮ್ಯ ಕೊಡಪಾಲ, ನೆಲ್ಲೂರು ಕೆಮ್ರಾಜೆ, ಶ್ರೀಮತಿ ಯಮುನಾ ದೇಶಕೋಡಿ ಮರ್ಕಂಜ, ಶ್ರೀಮತಿ ವೇದಾವತಿ ಕಲ್ಲುಗದ್ದೆ ಅರಂತೋಡು, ಶ್ರೀಮತಿ ಪದ್ಮ ಲೋಕೇಶ್ ತೋಟಚಾವಡಿ ದೊಡ್ಡೇರಿ, ಶ್ರೀಮತಿ ಮಮತಾ ಬೊಳುಗಲ್ಲು ಮಂಡೆಕೋಲು, ಸಂಜಯ ಕುಮಾರ್ ಪೈಚಾರು, ಸುಧಾಕರ ಅಡ್ಯಡ್ಕ ತೊಡಿಕಾನ, ಶೇಖರ ಮಡ್ತಿಲ ಐವರ್ನಾಡು ಸದಸ್ಯರಾಗಿ ನೇಮಕಗೊಂಡಿದ್ದಾರೆ.