ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗ್ರಾಹಕರ ಸದಸ್ಯರ ಸಭೆಯು ಅರಂಬೂರು ಶಾಖೆಯ ಬಳಿಯ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕರುಣಾಕರ ಹಾಸ್ಪಾರೆ, ನಿರ್ದೇಶಕ ರಾದ ಹರೀಶ್ ರಂಗತ್ತಮಲೆ, ಸುಧಾಕರ ಆಲೆಟ್ಟಿ, ಸುದರ್ಶನ ಪಾತಿಕಲ್ಲು, ಎನ್.ಎ.ಗಂಗಾಧರ, ಮಾಜಿ ಅಧ್ಯಕ್ಷ ಬಾಪೂ ಸಾಹೇಬ್, ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಳೆ ವಿಮೆಯ ಬಗ್ಗೆ, ಬೆಳೆ ಸಾಲ ಮರುಪಾವತಿ ಮಾಡುವ ಕುರಿತು, ವಾಹನ ಖರೀದಿ ಸಾಲ ಮತ್ತು ಸಂಘದಿಂದ ನೀಡುವ ಇತರ ಸಾಲದ ಬಗ್ಗೆ ಮಾಹಿತಿ ನೀಡಲಾಯಿತು. ದ್ವಿಚಕ್ರ, ಅಟೋ ರಿಕ್ಷಾ,ಜೀಪು,ಕಾರು ಖರೀದಿ ಯ ಮೇಲೆ ಸದಸ್ಯರಿಗೆ ಶೇ.10% ವಾರ್ಷಿಕ ದರದಲ್ಲಿ ಸಾಲ ಸೌಲಭ್ಯವಿರುವುದಾಗಿ ತಿಳಿಸಿದರು. ಸಂಘದ ಸಿ.ಇ.ಒ. ದಿನಕರ ಸ್ವಾಗತಿಸಿದರು. ಸುದರ್ಶನ ಪಾತಿಕಲ್ಲು ವಂದಿಸಿದರು. ಸಂಘದ ಸದಸ್ಯರು ಭಾಗವಹಿಸಿದರು.