Breaking News

ಬಾಳಿಲ ಗ್ರಾಮ ಪಂಚಾಯತ್ ಗ್ರಾಮ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಎಸ್.ಎಸ್.ಎಲ್.ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ

ಹಳೆಯ ವಿದ್ಯುತ್ ಕಂಬ,ವಯರ್ ಬದಲಾವಣೆ ಬಗ್ಗೆ ಚರ್ಚೆ

ಬಾಳಿಲ ಗ್ರಾಮ ಪಂಚಾಯತ್ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಚಾಕೊಟೆಡ್ಕರವರ ಅಧ್ಯಕ್ಷತೆಯಲ್ಲಿ ಮೇ.23 ರಂದು ಗ್ರಾಮ ಪಂಚಾಯತ್ ವಠಾರದ ಲ್ಲಿ ನಡೆಯಿತು.


ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೂವಪ್ಪ ಗೌಡರವರು ಸ್ವಾಗತಿಸಿದರು.
ಕಾರ್ಯದರ್ಶಿ ಜಯಶೀಲ ರೈ
ಮಂಡಿಸಿದರು.
ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಶ್ರೀಮತಿ ಸುಹಾನ ನೋಡೆಲ್ ಅಧಿಕಾರಿಯಾಗಿದ್ದರು.
ಎಸ್.ಎಸ್.ಎಲ್.ಸಿಯಲ್ಲಿ 600 ಹೆಚ್ಚು ಅಂಕ ಪಡೆದ ಬಾಳಿಲ ವಿದ್ಯಾಬೋದಿನಿ ಶಾಲೆಯ ಪ್ರದೀಪ್ ಟಿ.624 ಅಂಕ, ಕಾಣಿಯೂರು ಪ್ರಗತಿ ಶಾಲೆಯ ರಕ್ಷಾ 621, ಬಾಳಿಲ ಶಾಲೆಯ ಮಧುರಾ ಶಾಸ್ತ್ರಿ 618,ಕಾಣಿಯೂರಿನ ಸಮೃದ್ಧಿ ಶೆಟ್ಟಿ ಕೆ 602 , ನಿಧಿ ರೈ 602, ಬಾಳಿಲ ಶಾಲೆಯ ಚೈತ್ರೇಶ್ ಎಂ.ಎಸ್.601, ಕುಶಿ ಪಿ.ಎಸ್.600 ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.
ಉದ್ಯೋಗ ಖಾತರಿಯಲ್ಲಿ ಎರಡು ಕಡೆ ಕೆರೆ ಅಭಿವೃದ್ಧಿಗೊಳಿಸಿದ ಸಂಜೀವಿನಿ ತಂಡದ ಮಹಿಳೆಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳ ಅಭಿನಂದನಾ ಪತ್ರವನ್ನು ಕಾರ್ಯದರ್ಶಿ ಜಯಶೀಲ ರೈ, ಪಂಚಾಯತ್ ಸಿಬ್ಬಂದಿ ಸುಂದರ,ಶ್ರೀಮತಿ ಪವಿತ್ರ ವಾಚಿಸಿದರು.
ಇಲಾಖಾಧಿಕಾರಿಗಳು ತಮ್ಮ ಇಲಾಖೆಗಳ ಬಗ್ಗೆ ಮಾಹಿತಿ ನೀಡಿದರು.
ಮೆಸ್ಕಾಂ ಇಲಾಖೆಯವರು ಮಾಹಿತಿ ನೀಡುತ್ತಿದ್ದಂತೆ ಹಳೆಯ ವಿದ್ಯುತ್ ಕಂಬ,ವಯರ್ ಬದಲಾವಣೆ ಬಗ್ಗೆ ಗ್ರಾಮಸ್ಥರು ಕೇಳಿದರು.
ಫೋನ್ ಮಾಡಿದರೆ ಜೆ.ಇ. ಫೋನ್ ತೆಗೆಯುವುದಿಲ್ಲ ಇಲ್ಲಿ ವಿದ್ಯುತ್ತಿನ ಸಮಸ್ಯೆ ತುಂಬಾ ಇದೆ ಎಂದು ಹೇಳಿದರು.
ಇದಕ್ಕೆ ಮೆಸ್ಕಾಂ ಸಿಬ್ಬಂದಿ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಉತ್ತರಿಸಿದರು.
ಆದರೆ ಇದನ್ನು ಕೇಳದೆ ಸರಸ್ವತಿ ಕಾಮತ್ ರವರು ನೀವು ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಬೇಕು ನೀವು ಸ್ಪಂದಿಸುವುದಿಲ್ಲ.ಫೋನ್ ತೆಗೆಯುವುದಿಲ್ಲ.
ಎಂದು ಹೇಳಿದರು.
ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು.
ಪಂಚಾಯತ್ ಸದಸ್ಯರಾದ ರವೀಂದ್ರ ರೈ,ಹರ್ಷ ಜೆ.ಯವರು ಕೂಡಾ ವಿದ್ಯುತ್ ಸಮಸ್ಯೆ ಬಗ್ಗೆ ವಿವರಿಸಿದರು.
ಮುಪ್ಪೇರ್ಯ ಪಾದೆಕಲ್ಲು ತಾರಾ ಎಂಬವರು ಮಾತನಾಡಿ ನಮ್ಮ ಮನೆಯ ಸಮೀಪ ಹಳೆ ವಿದ್ಯುತ್ ಕಂಬ ವಾಲಿದ್ದು ಇದನ್ನು ಕೂಡಲೇ ಬದಲಾವಣೆ ಮಾಡಬೇಕು ಎಂದು ಹೇಳಿ.
ಈ ಬಗ್ಗೆ ನಾವು ಹಲವು ಬಾರಿ ಮೆಸ್ಕಾಂ ನವರನ್ನು ವಿನಂತಿಸಿದ್ದೇವೆ ಆದರೆ ಇಲ್ಲಿಯವರೆಗೆ ಸರಿ ಮಾಡಲಿಲ್ಲ ಎಂದು ಹೇಳಿದರು.
ಬಾಲಕೃಷ್ಣ ಎಂಬವರು ಮರಂಗಾಲದಲ್ಲಿ ವಿದ್ಯುತ್ ಲೈನ್ ಜೋತು ಬಿದ್ದಿದ್ದು ಅಪಾಯದಲ್ಲಿದೆ.
ವಿದ್ಯಾರ್ಥಿಗಳು ನಡೆದು ಹೋಗುವ ದಾರಿಯಾಗಿದ್ದು ಅಪಾಯದಲ್ಲಿದೆ.
ಇದನ್ನು ಬದಲಾವಣೆ ಮಾಡಬೇಕೆಂದು ಹೇಳಿದರು.
ವಿದ್ಯುತ್ ಸಮಸ್ಯೆ ಬಗ್ಗೆ ಕೆಲಹೊತ್ತು ಚರ್ಚೆಗಳು ನಡೆದವು.
ನಂತರ ಪಂಚಾಯತ್ ನಿಂದ ಗ್ರಾಮದ ವಿದ್ಯುತ್ ಸಮಸ್ಯೆಗಳ ಬಗ್ಗೆ ಲಿಸ್ಟ್ ಮಾಡಿ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸುವುದಾಗಿ ನಿರ್ಣಯ ಮಾಡಲಾಯಿತು.
ಸರಸ್ವತಿ ಕಾಮತ್ ರವರು ಒಂದು ವಾರದೊಳಗೆ ಸರಿ ಮಾಡದಿದ್ದರೆ ಗ್ರಾಮಸ್ಥರನ್ನು ಸೇರಿಸಿಕೊಂಡು ಕೆ.ಇ.ಬಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಹೇಳಿದರು.
ರಾಧಾಕೃಷ್ಣ ರಾವ್, ಜಾಹ್ನವಿ ಕಾಂಚೋಡುರವರು ವಿದ್ಯುತ್ ಸಮಸ್ಯೆ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ, ಸದಸ್ಯರಾದ ರವೀಂದ್ರ ರೈ ಟಪ್ಪಾಲುಕಟ್ಟೆ,ಶ್ರೀಮತಿ ಸುಶೀಲ ಕೆ.ಕಾಪಡ್ಕ, ಶ್ರೀಮತಿ ಪಾವನ ಕೆ.ಜೋಗಿಬೆಟ್ಟು, ಜೆ.ಹರ್ಷ ಜೋಗಿಬೆಟ್ಟು, ರಮೇಶ್ ರೈ ಅಗಲ್ಪಾಡಿ, ಶ್ರೀಮತಿ ಸರಸ್ವತಿ ಕಾಮತ್, ಆನಂದ ಪಂಜಿಗಾರು ಉಪಸ್ಥಿತರಿದ್ದರು.
ಕಮಲ ಮತ್ತು ಮಧುರಾ ಪ್ರಾರ್ಥಿಸಿ,ಉಪಾಧ್ಯಕ್ಷೆ ತ್ರಿವೇಣಿ ವಂದಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.