ಮುರುಳ್ಯ ದಿ. ಬೆಳ್ಯಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಪಾರ್ವತಿ ಎಂ. ಬಿ.ಯವರು ಇತ್ತೀಚೆಗೆ ನಿಧನರಾಗಿದ್ದು, ಅವರ ಉತ್ತರಕ್ರಿಯಾದಿ ಸದ್ಗತಿ ಈ ಕಾರ್ಯಕ್ರಮಗಳು ನಡೆದು ಮೇ.23 ರಂದು ಅವರು ಸ್ಥಳದಾನ ಮಾಡಿದ ದೇವರಕಾನ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಶ್ರದ್ದಾಂಜಲಿ ಸಭೆ, ನುಡಿ ನಮನ, ವೈಕುಂಠ ಸಮಾರಾಧನೆ ನಡೆಯಿತು.
ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪಿ ರಾಮಚಂದ್ರ ಭಟ್ಟ ದೇವಸ್ಯರವರು ಮೃತರಿಗೆ ಅಂತಿಮ ನಮನ ಸಲ್ಲಿಸಿ ಮಾತನಾಡಿ, ಪಾರ್ವತಿಯವರು ದೇವಸ್ಥಾನದ ಟ್ರಸ್ಟ್ ನ ಗೌರವಾಧ್ಯಕ್ಷರಾಗಿ ದೇವಸ್ಥಾನ ನಿರ್ಮಿಸಲು ಸ್ಥಳವನ್ನು ದಾನವಾಗಿ ಬಿಟ್ಟುಕೊಟ್ಟಿರುತ್ತಾರೆಂದು ಹೇಳಿದರು. ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕ ಡಾ.ಯು. ಪಿ. ಶಿವಾನಂದರವರು ಮೃತರ ಕುಟುಂಬದ ಹಿನ್ನೆಲೆ ಮತ್ತು ಪಾರ್ವತಿ ಎಂ. ಬಿ. ಯವರು ಬೆಳೆದು ಬಂದ ರೀತಿಯನ್ನು ವಿವರಿಸಿ ನುಡಿನಮನ ಸಲ್ಲಿಸಿ, ಪುಷ್ಪಾರ್ಚನೆಗೈದರು.
ಸಂದರ್ಭದಲ್ಲಿ ಕುಟುಂಬದ ಹಿರಿಯರು, ಮಕ್ಕಳು, ಅಳಿಯಂದಿರು, ಸಹೋದರಿಯರು, ಮೊಮ್ಮಕ್ಕಳು, ಹಿತೈಷಿಗಳು, ಊರವರು’ ಬಂಧುಗಳು ಉಪಸ್ಥಿತರಿದ್ದರು.
ಮೃತರ ಪುತ್ರ ದಿವೀಶ್ ರವರು ಕಾರ್ಯಕ್ರಮ ನಿರೂಪಿಸಿದರು.