ಯೋಗಾಸನದಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ ಹೆಸರು ಮಾಡಿದ್ದಾರೆ. ಬದ್ದ ಪದ್ಮಾಸನ ದಲ್ಲಿ 1ಗಂಟೆ 02 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಎಪ್ರಿಲ್ ಮೊದಲ ವಾರದಲ್ಲಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ಮಾಡಿದ್ದ ಈತ ಎರಡು ತಿಂಗಳೊಳಗೆ ಎರಡನೇ ದಾಖಲೆ ಮಾಡಿದ್ದಾನೆ.
ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿರುವ ಮೋನಿಷ್ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ
6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೋನಿಷ್ ತಂಟೆಪ್ಪಾಡಿ ವಿಶ್ವನಾಥ ಮತ್ತು ದಯಾಮಣಿ ದಂಪತಿಯ ಪುತ್ರ.