ಎನ್.ಎಂ.ಸಿ ಕಾಲೇಜು ಸುಳ್ಯ ಇದರ ಎನ್.ಸಿ.ಸಿ. ವಿದ್ಯಾರ್ಥಿನಿ ಪ್ರತೀಕ್ಷಾ.ಡಿ.ಎಸ್ ಇವರು ಮಡಿಕೇರಿ 19KAR ಬೆಟಾಲಿಯನ್ ನಿಂದ ಬೆಂಗಳೂರಿನಲ್ಲಿ ನಡೆಯುವ ಇಂಟರ್ ಗ್ರೂಪ್ ಫೈರಿಂಗ್ ಕಾಂಪಿಟೇಷನ್ ನಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ.
ಎನ್.ಎಂ.ಸಿ ಪದವಿ ಕಾಲೇಜಿನ ದ್ವಿತೀಯ B.S.W ನ ವಿದ್ಯಾರ್ಥಿನಿಯಾಗಿರುವ ಇವರು ದೋಲನಮನೆ ಡಿ.ಸತ್ಯನಾರಾಯಣ ಹಾಗೂ ಲಲಿತಾ ಡಿ.ಎಸ್ ಇವರ ಪುತ್ರಿ. ಇವರಿಗೆ ಕಾಲೇಜಿನ ಲೆಪ್ಟಿನೆಂಟ್ ಸೀತಾರಾಮ ಎಂ.ಡಿ ತರಬೇತಿ ನೀಡಿರುತ್ತಾರೆ.