ಕುತ್ಯಾಡಿಯಲ್ಲಿ ಉಳ್ಳಾಕುಲು ದೈವದ ಅಡ್ಡಣಪೆಟ್ಟು ಉತ್ಸವ
ಮಾಡದಲ್ಲಿ ಉಳ್ಳಾಕುಲು ನೇಮೋತ್ಸವ
ಮಂಡೆಕೋಲು ಗ್ರಾಮದ ಪೇರಾಲು ಬಜಪ್ಪಿಲ ಕ್ಷೇತ್ರದಲ್ಲಿ ಉಳ್ಳಾಕುಲು ದೈವದ ಮಡಕ ಜಾತ್ರೆ ಇಂದು ನಡೆಯಿತು.
ಬೆಳಗ್ಗೆ ಬಜಪ್ಪಿಲ ಕ್ಷೇತ್ರದಿಂದ ಭಂಡಾರ ತೆಗೆದು ಪ್ರಾರ್ಥನೆ ನಡೆದ ಬಳಿಕ, ಉಳ್ಳಾಕುಲು ದೈವದೊಂದಿಗೆ ಕುತ್ಯಾಡಿಗೆ ಹೋಗಲಾಯಿತು. ಅಲ್ಲಿ ಉಳ್ಳಾಕುಲು ದೈವದ ಅಡ್ಟಣಪೆಟ್ಟು ಉತ್ಸವ ನಡೆದ ಬಳಿಕ ಭಂಡಾರ ಮಾಡಕ್ಕೆ ತರಲಾಯಿತು. ಅಲ್ಲಿ ಬಜಪ್ಪಿಲ ದೈವದ ನೇಮೋತ್ಸವ ನಡೆಯಿತು.
ಬಳಿಕ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರುಗಿತು. ಸಾವಿರಾರು ಮಂದಿ ಈ ಪುಣ್ಯ ಕಾರ್ಯವನ್ನು ಕಣ್ತುಂಬಿಕೊಂಡರು.