Breaking News

ಯುವತಿಯ ಪೋನ್ ಕಿತ್ತುಕೊಂಡು ಪೋನ್ ನಂಬರ್ ಕೇಳಿದ ಯುವಕನಿಗೆ ಧರ್ಮದೇಟು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಹಳೆಗೇಟು ಯುವತಿಯೋರ್ವಳ ಫೋನ್ ನಂಬರ್ ಕೇಳಿ ಮೊಬೈಲ್ ಕಿತ್ತು ಅಸಭ್ಯ ವರ್ತನೆ ಮಾಡಿದ್ದನೆಂದು ಆರೋಪಿಸಿ ಯುವತಿಯ ಪೋಷಕರು ಹಾಗೂ ಸ್ಥಳೀಯರು ಯುವಕನನ್ನು ಥಳಿಸಿದ ಘಟನೆ ನಿನ್ನೆ ಸಂಜೆ ಹಳೆಗೇಟಿನಿಂದ ವರದಿಯಾಗಿದೆ.
ಹಳೆಗೇಟಿನಲ್ಲಿ ಕಾರ್ಯಚರಿಸುತ್ತಿರುವ ಫ್ಯಾನ್ಸಿ ಅಂಗಡಿಯೊಂದರ ಯುವತಿಗೆ ಹಳೆಗೇಟಿನ ಹೋಟೆಲೊಂದರಲ್ಲಿ ಕೆಲಸ ಮಾಡುವ ಪಳ್ಳಂಗೋಡು ಮೂಲದ ಸಲೀಂ ಎಂಬ ಯುವಕ ನಿನ್ನೆ ಮಧ್ಯಾಹ್ನ ಫ್ಯಾನ್ಸಿ ಅಂಗಡಿಗೆ ತೆರಳಿ ಖರೀದಿಗಾಗಿ ವಿಚಾರಿಸುವ ನೆಪದಲ್ಲಿ ಯುವತಿಯ ಫೋನ್ ನಂಬರ್ ಕೇಳಿದನೆನ್ನಲಾಗಿದೆ.

ಈ ಸಂದರ್ಭ ಯುವತಿ ನಂಬರ್ ನೀಡಲು ನಿರಾಕರಿಸಿದಾಗ ಯುವತಿಯ ಕೈಯಿಂದ ಮೊಬೈಲ್ ಫೋನ್ ಕಿತ್ತುಕೊಂಡು ಅದರಿಂದ ತನ್ನ ಮೊಬೈಲಿಗೆ ಫೋನ್ ಮಾಡುವ ಸಂದರ್ಭ ಯುವತಿ ಮೊಬೈಲ್ ಎಳೆದುಕೊಂಡು ಸ್ಥಳೀಯರನ್ನು ಕರೆದಳೆನ್ನಲಾಗಿದೆ. ಈ ಸಂದರ್ಭ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ.
ನಂತರ ಯುವತಿ ಅವರ ಮನೆಯವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಮತ್ತು ಸ್ಥಳೀಯ ಯುವಕರು ಹೋಟೆಲ್ ಬಳಿಗೆ ಬಂದು ಯುವಕನನ್ನು ಅಂಗಡಿಯಿಂದ ಹೊರಕ್ಕೆ ಕರೆದು ಧರ್ಮದೇಟು ನೀಡಿದರೆನ್ನಲಾಗಿದೆ.
ಸ್ವಲ್ಪ ಹೊತ್ತಿನಲ್ಲಿ ಬಂದ ಹೋಟೆಲ್ ಮಾಲಕರು ಆ ಯುವಕನಿಗೆ ಒಂದೇಟು ಬಿಗಿದು ಆತನನ್ನು ಕೆಲಸದಿಂದ ವಜಾಗೊಳಿಸಿ ಕಳುಹಿಸಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.