ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ( ರಿ) ಸುಬ್ರಹ್ಮಣ್ಯ. ಇದರ ಆಡಳಿತಕ್ಕೊಳಪಟ್ಟ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಗೆ 2021 – 22 ನೇ ಸಾಲಿನ ಎಸ್ .ಎಸ್ .ಎಲ್ .ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರತಿಶತ ನೂರು ಫಲಿತಾಂಶ ಬಂದಿದ್ದು, ಏಳು ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ,21 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಮೂರು ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಆಶಿಕ 616 {98.56%} ಪ್ರೀತಾ 593 (94.88%) , ಸಿಂಚನ 586(93.76%), ಅನುಶ್ರೀ 581 (92.96%), ಶ್ರೀಜನ್ಯ 567 (90.72%), ಸಾಕ್ಷ 543(86.88%), ರಿತೇಶ್ 537 ( 85.92%,), ಇವರನ್ನು ಹಾಗೂ ನೂರು ಶೇಕಡಾ ಫಲಿತಾಂಶಕ್ಕೆ ಸಹಕರಿಸಿದ ಎಲ್ಲಾ ಅಧ್ಯಾಪಕ, ಅಧ್ಯಾಪಕೇತರ ವೃಂದವರನ್ನು ಆಡಳಿತ ಮಂಡಳಿಯ ವತಿಯಿಂದ ಮೇ.23 ರಂದು ಅಭಿನಂದಿಸಲಾಯಿತು.
ಆಡಳಿತ ಮಂಡಳಿಯ ಸಂಚಾಲಕರಾದ ಸುದರ್ಶನ ಜೋಯಿಸ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಶರ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಶಾಲಾ ಅಡಳಿತಾ ಮಂಡಳಿಯ ಕೋಶಾಧಿಕಾರಿಗಳಾದ ಯಜ್ಞೇಶ್ ಆಚಾರ್, ಸೇವಾ ನಿವೃತ್ತಿ ಹೊಂದಿದ ಮುಖ್ಯಗುರುಗಳಾದ ಶ್ರೀ ಗೋಪಾಲಕೃಷ್ಣ ಬಿ , ಹಿರಿಯಣ್ಣ ಗೌಡ, ವಸಂತಿ ಜೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವರಾಮ ಏನೆಕಲ್,ಎಸ್ ಡಿ ಎಂಸಿ ಅಧ್ಯಕ್ಷರಾದ ಗಿರೀಶ್ ಕಳಿಗೆ, ವೇದವ್ಯಾಸ ವಿದ್ಯಾಲಯದ ಮುಖ್ಯಗುರುಗಳಾದ ಪ್ರಶಾಂತ್ ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಗಣಪತಿ ಭಟ್ ಸ್ವಾಗತಿಸಿದರು .ಚಿತ್ರಕಲಾ ಅಧ್ಯಾಪಕರಾದ ದಿನೇಶ್ ಕುಂದರ್ ವಂದಿಸಿದರು. ಸತ್ಯಶಂಕರ ಭಟ್ ಕಾರ್ಯಕ್ರಮ ನಿರೂಪಿಸಿದರು.