ಕೊಲ್ಲಮೊಗ್ರದ ಹೊಟೇಲೊಂದರ ಮಾಲಕಿಯ ಮೇಲೆ ಕಟ್ಟಡ ಮಾಲೀಕ ಮಾನಭಂಗ ಯತ್ನ ಮತ್ತು ಜೀವ ಬೆದರಿಕೆ ಒಡ್ಡಿದ ಆರೋಪದಡಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಕೊಲ್ಲಮೊಗ್ರದ ಟಿ. ಎಂ. ಮೊಹಮ್ಮದ್ ಎಂಬವರನ್ನು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶ ಸೋಮಶೇಖರ್ ಅವರು ಜಾಮೀನು ನೀಡಿ ಆದೇಶ ಮಾಡಿದ್ದಾರೆ. ಆರೋಪಿಯ ಪರವಾಗಿ ಎಂ ವೆಂಕಪ್ಪ ಗೌಡ ವಾದಿಸಿದ್ದರು.