ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಇದರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ್ ಸುಳ್ಯ ಇವರ ಸಹಯೋಗದೊಂದಿಗೆ,ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇವರ ಸಹಕಾರದೊಂದಿಗೆ ಕನ್ನಡ ಕಲಾ ಪ್ರತಿಭೋತ್ಸವ -೨೦೨೨ ಹಾಗೂ ಸಾಧಕರಿಗೆ ಸಮಾಜ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ.೧೨ರಂದು ಸುಳ್ಯ ಅಂಬಟೆಡ್ಕ ಕನ್ನಡ ಭವನದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮತ್ತು ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ಡಾ. ದೇವದಾಸ್ ಕಾಪಿಕಾಡ್ ರವರಿಗೆ ಸನ್ಮಾನ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ,ವಿದುಷಿ ಯೋಗೀಶ್ವರಿ ಜಯಪ್ರಕಾಶ್ ( ಭರತನಾಟ್ಯ),ಶ್ರೀಕೃಷ್ಣ ಸೋಮಯಾಗಿ (ಧಾರ್ಮಿಕ), ಬಾಲಕೃಷ್ಣ ಭಟ್ ಕೊಡೆಂಕಿರಿ(ಶಿಕ್ಷಣ), ಸುಬ್ರಹ್ಮಣ್ಯ ಎ.ಯು.(ಶಿಕ್ಷಣ),ಎಂ.ಎಂ.ಹಸೈನಾರ್ ( ಮಾಧ್ಯಮ), ರಿಚರ್ಡ್ ಕ್ರಾಸ್ತಾ(ಸಮಾಜ ಸೇವೆ),ಭೋಜಪ್ಪ ಗೌಡ (ಕೃಷಿ), ನವೀನ್ ಮಚಾದೊ(ಸಮಾಜ ಸೇವೆ) ರವರಿಗೆ ಸಮಾಜ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮಸೇಖರ ಎ. ನೇರವೇರಿಸಲಿದ್ದು, ನಿವೃತ್ತ ಬಿ.ಡಿ.ಒ. ಶ್ರೀಮತಿ ಮೀನಾಕ್ಷಿ ಗೌಡ ಸನ್ಮಾನ ಮಾಡಲಿದ್ದಾರೆ. ಲಯನ್ಸ್ ಮಾಜಿ ರಾಜ್ಯಪಾಲ ಲ.ಎಂ.ಬಿ.ಸದಾಶಿವ, ಸುಳ್ಯ ತಾಲೂಕು ಕ.ಸಾ.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲು, ವಿದುಷಿ ಯೋಗೀಶ್ವರಿ ಜಯಪ್ರಕಾಶ್, ಸುಳ್ಯ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮಂಜುನಾಥ ಮೇಸ್ತ್ರಿ ಬಳ್ಳಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸುಳ್ಯ ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ್ ಅಧ್ಯಕ್ಷತೆ ವಹಿಸಲಿದ್ದು, ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥರವರು ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜ್ಞಾನ ಮಂದಾರ ಟ್ರಸ್ಟ್ನ ಸಂಸ್ಥಾಪಕರಾದ ಸೋಮಶೇಖರ್ ಮತ್ತು ನಿರ್ದೇಶಕಿ ವಿದುಷಿ ಹರ್ಷಿತ ಎನ್.ಉಪಸ್ಥಿತರಿರುತ್ತಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.